ಚಿನ್ನ ಕಳ್ಳ ಸಾಗಾಟ ಕಮ್ಯೂನಿಸ್ಟ್ ಪಕ್ಷದ ಕುಲಕಸುಬು-ಎಂ.ಎಲ್. ಅಶ್ವಿನಿ ಆರೋಪ

ಮಂಜೇಶ್ವರ: ಚಿನ್ನ ಕಳ್ಳ ಸಾಗಾಟ ಕಮ್ಯೂನಿಸ್ಟ್ ಪಕ್ಷ ಕುಲಕಸುಬಾಗಿ ಮಾಡಿಕೊಂಡಿದೆಯೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಆರೋ ಪಿಸಿದ್ದಾರೆ. ಆಡಳಿತ ಬಲ ಉಪಯೊ ಗಿಸಿ ಶಬರಿಮಲೆ ಸನ್ನಿಧಿಯಲ್ಲಿಯೇ ಚಿನ್ನ ಕಳ್ಳ ಸಾಗಾಟಕ್ಕೆ ಸಾಥ್ ನೀಡಿರು ವುದು ಪಿಣರಾಯಿ ಸರಕಾರ ಹಿಂದೂಗಳ ಧಾರ್ಮಿಕ ಭಾವನೆ, ನಂಬಿಕೆಗೆ ಮಾಡಿರುವ ಅವಮಾನ ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಭೆಯನ್ನು ವರ್ಕಾಡಿ ಕಚೇರಿಯಲ್ಲಿ ಉದ್ಘಾಟಿಸಿ  ಅವರು ಮಾತಾಡಿದರು. ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ. ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷ ಮಣಿಕಂಠ ರೈ, ಎಸ್‌ಸಿ ಮೋರ್ಛಾ ರಾಜ್ಯ ಉಪಾಧ್ಯಕ್ಷ ಎ.ಕೆ. ಕಯ್ಯಾರ್, ಮಾಧು, ಮುಖಂಡರಾದ ಸದಾಶಿವ ಚೇರಾಲ್, ಮಂಜುನಾಥ ಶೆಟ್ಟಿ, ಆಶಾಲತಾ ಬಿ.ಎಂ., ಸುಬ್ರಹ್ಮಣ್ಯ ಭಟ್, ಭಾಸ್ಕರ ಪೊಯ್ಯೆ,ಸತ್ಯಶಂಕರ್, ಬೆಜ್ಜ, ಚಂದ್ರಹಾಸ ಹಾಗೂ ವಿವಿಧ ಮೋರ್ಛಾ ನೇತಾರರು ಉಪಸ್ಥಿತರಿದ್ದರು. ಯತಿರಾಜ್ ಶೆಟ್ಟಿ ಸ್ವಾಗತಿಸಿ, ತುಳಸಿ ಕುಮಾರಿ ವಂದಿಸಿದರು.

ಇದೇ ಸಂದರ್ಭ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ  ವಿವಿಧ ಮೋರ್ಛಾಗಳ ಮಂಡಲ ಅಧ್ಯಕ್ಷರನ್ನು ಘೋಷಣೆ ಮಾಡಿದರು. ಎಸ್‌ಸಿ ಮೋರ್ಛಾ ಮಂಜೇಶ್ವರ ಮಂಡಲ ಅಧ್ಯಕ್ಷರಾಗಿ  ರಾಮ ಏದಾರ್  ಪೈವಳಿಕೆ, ಕರ್ಷಕ ಮೋರ್ಛಾ ಅಧ್ಯಕ್ಷರಾಗಿ ವಿವೇಕಾನಂದ ವರ್ಕಾಡಿ, ಯುವಮೋರ್ಛಾ ಅಧ್ಯಕ್ಷರಾಗಿ ಉದಯ ಪೂಜಾರಿ ಸುಳ್ಯಮೆ, ಬಿಜೆಪಿ ಮಂಜೇಶ್ವರ ಮಂಡಲ ಉಪಾಧ್ಯಕ್ಷರಾಗಿ ಸದಾಶಿವ ಬೇಕರಿ ವರ್ಕಾಡಿ,  ಮಂಡಲ ಕಾರ್ಯದರ್ಶಿಯಾಗಿ ಸಂದೀಪ್ ರೈ ಇವರನ್ನು ನೇಮಕ ಮಾಡಲಾಯಿತು.

You cannot copy contents of this page