ಶಬರಿಮಲೆ ಚಿನ್ನ ಕಳವು: ನ್ಯಾಯಾಂಗಬಂಧನದಲ್ಲಿರುವ ತಂತ್ರಿಗೆ ಎದೆನೋವು; ಆಸ್ಪತ್ರೆಗೆ ದಾಖಲು

ತಿರವನಂತಪುರ: ಶಬರಿಮಲೆ ಚಿನ್ನ ಕಳವು ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ತಂತ್ರಿ ಕಂಠರರ್ ರಾಜೀವರ್‌ರನ್ನು ಎದೆನೋವಿನ ಹಿನ್ನೆಲೆಯಲ್ಲಿ ತಿರುವನಂತಪುರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿ ಸಲಾಗಿದೆ. ಮೆಡಿಕಲ್ ಕಾಲೇಜು ಆಸ್ಪತ್ರೆಯ ಜೈಲು ಸೆಲ್‌ನಲ್ಲಿ ಇವರನ್ನು ದಾಖಲಿಸಲಾಗಿದ್ದು, ಆಂಜಿಯೋ ಗ್ರಾಮ್ ತಪಾಸಣೆ ನಡೆಸಲಾಗಿದೆ. ಕೇಸಿನಲ್ಲಿ 13ನೇ ಆರೋಪಿಯಾಗಿರುವ ತಂತ್ರಿಯ ಪತ್ನಿ ನೀಡಿದ ಜಾಮೀನು ಅರ್ಜಿಯನ್ನು ಕೊಲ್ಲಂ ವಿಜಿಲೆನ್ಸ್ ನ್ಯಾಯಾಲಯ ಪರಿಗಣಿಸಲಿದೆ. ಚಿನ್ನ ಕಳ್ಳತನದಲ್ಲಿ ತಂತ್ರಿಯವರಿಗೂ ಪಾಲಿದೆ ಎಂದು ಪ್ರತ್ಯೇಕ ತನಿಖಾ ತಂಡ ಆರೋಪಿಸುತ್ತಿದೆ.

RELATED NEWS

You cannot copy contents of this page