ನವ ಕೇರಳ ಸರ್ವೇ ಹೈಕೋರ್ಟ್ ರದ್ದುಗೊಳಿಸಿದ 24 ಗಂಟೆಯೊಳಗೆ ಸುಪ್ರೀಂಕೋರ್ಟ್‌ನಲ್ಲಿ ಸರಕಾರದಿಂದ ಅಪೀಲು

ತಿರುವನಂತಪುರ: ನವಕೇರಳ ಸಮೀಕ್ಷೆ ರದ್ದುಗೊಳಿಸಿದ ಹೈಕೋರ್ಟ್ ನ ತೀರ್ಪು ವಿರುದ್ಧ ರಾಜ್ಯ ಸರಕಾರ 24 ಗಂಟೆಯೊಳಗೆ ಸುಪ್ರೀಂಕೋರ್ಟ್ ನಲ್ಲಿ ಅಪೀಲು ಸಲ್ಲಿಸಿದೆ. ಸರಕಾರದ ಈ ಅತೀ ವೇಗ ನಡೆ ಜನರಲ್ಲಿ ಕೌತುಕಕ್ಕೆ ಕಾರಣವಾಗಿದೆ. ಸರಕಾರದ ನಿಲುವು ಪರವಾದ ತೀರ್ಮಾನವಾ ಗಿದೆ ನವಕೇರಳ ಸಮೀಕ್ಷೆಯೆಂದು, ಹೈಕೋರ್ಟ್ ತೀರ್ಪಿನಲ್ಲಿ ಲೋಪದೋಷವಿದೆಯೆಂದು ಅರ್ಜಿಯಲ್ಲಿ ಸರಕಾರ ಸೂಚಿಸಿದೆ. ಕ್ಯಾಬಿನೆಟ್ ತೀರ್ಮಾನವನ್ನು ಹೈಕೋರ್ಟ್ ಹೇಗೆ ರದ್ದುಗೊಳಿಸುವುದೆಂದು ಅಪೀಲಿನಲ್ಲಿ ಪ್ರಶ್ನಿಸಲಾಗಿದೆ. ಆದರೆ ಸಮೀಕ್ಷೆಗೆ ಅಗತ್ಯವಾದ ಮೊತ್ತ ಬಜೆಟ್‌ನಲ್ಲಿ ಮೀಸಲಿಟ್ಟಿಲ್ಲವೆಂದು ಹಣಕಾಸು ಇಲಾಖೆಯ ಅನುಮತಿ ಇಲ್ಲದೆ ಸರಕಾರ ಸಮೀಕ್ಷೆಗೆ ಅನುಮತಿ ನೀಡಿರುವುದೆಂದು ನ್ಯಾಯಾಲಯ ಸೂಚಿಸಿತ್ತು.

RELATED NEWS

You cannot copy contents of this page