ನಿವೃತ್ತ ತಹಶೀಲ್ದಾರ್, ಗುರುಸ್ವಾಮಿ ಶಂಕರ ದೇವಾಂಗ ನಿಧನ

ಕಾಸರಗೋಡು: ಅಣಂಗೂರು ಶಾರದಾನಗರ ನಿವಾಸಿಯೂ ನಿವೃತ್ತ ತಹಶೀಲ್ದಾರ್ ಬಿ. ಶಂಕರ ದೇವಾಂಗ (86) ನಿನ್ನೆ ಸ್ವ-ಗೃಹದಲ್ಲಿ ನಿಧನ ಹೊಂದಿದರು. 51 ವರ್ಷಗಳ ಕಾಲ ಶಬರಿಮಲೆ ಕ್ಷೇತ್ರ ದರ್ಶನ ನಡೆಸಿದ ಇವರು ಗುರುಸ್ವಾಮಿಯಾಗಿ ದ್ದರು. ಮಾನ್ಯ ಶ್ರೀ ಅಯ್ಯಪ್ಪ ಭಜನಾ ಮಂದಿರದ ಪ್ರತಿಷ್ಠಾ ಗುರುಸ್ವಾಮಿ ಯಾಗಿದ್ದರು. ಕಾಸರಗೋಡು ಶ್ರೀ ಅಯ್ಯಪ್ಪ ಸೇವಾ ಸಂಘದ ಸದಸ್ಯ, ಕುಂಬಳೆ ನಾಯ್ಕಾಪು ಶ್ರೀ ಚೀರುಂಬಾ ಭಗವತೀ ಕ್ಷೇತ್ರದ ಮಾಜಿ ಅಧ್ಯಕ್ಷರೂ ಆಗಿದ್ದರು. ಮೃತರು ಪತ್ನಿ ಪಾರ್ವತಿ, ಮಕ್ಕಳಾದ ಪ್ರಶಾಂತ್ (ವ್ಯಾಪಾರಿ), ಪವಿತ್ರನ್ (ವ್ಯಾಪಾರಿ), ಕಲಾವತಿ (ಮಂಗಳೂರು), ಸೊಸೆಯಂದಿರಾದ ಚಿತ್ರಕಲಾ, ಸುಶೀಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಅಳಿಯ ಶ್ರೀಧರನ್ ಈ ಹಿಂದೆ ನಿಧನರಾಗಿದ್ದಾರೆ.

You cannot copy contents of this page