ಪುತ್ತಿಗೆ: ಮಾರಕ ಮಾದಕದ್ರ ವ್ಯವಾದ ಹ್ಯಾಶಿಶ್ ಆಯಿಲ್ ಕೈವಶ ವಿರಿಸಿಕೊಂಡ ಇಬ್ಬರನ್ನು ಕುಂಬಳೆ ಪೊಲೀಸರು ದಸ್ತಗಿರಿಗೈದಿದ್ದಾರೆ.
ಕುಂಬಳೆ ಸಮೀಪದ ಆರಿಕ್ಕಾಡಿ ಲಕ್ಷಂವೀಡು ಕಾಲನಿ ನಿವಾಸಿಗಳಾದ ಮೊಹಮ್ಮದ್ ಫಸಲ್ ಯಾನೆ ಫಾಹು ಯಾನೆ ಕಂಡನ್ ಫಸಲ್(40) ಮತ್ತು ಈತನ ಹತ್ತಿರದ ಸಂಬಂಧಿಕನಾದ ಅಬ್ದುಲ್ ನಿಝಾರ್ ಯಾನೆ ಇಚ್ಚಾದ್ (23) ಎಂಬಿವರನ್ನು ಕುಂಬಳೆ ಇನ್ಸ್‌ಪೆಕ್ಟರ್ ಟಿ.ಕೆ. ಮುಕುಂದನ್, ಎಸ್‌ಐ ಅನಂತಕೃಷ್ಣನ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ. ಆರೋಪಿಗಳ ಕೈಯಿಂದ 7.4 ಗ್ರಾಂ ಹ್ಯಾಶಿಶ್ ಆಯಿಲ್ ವಶಪಡಿಸಲಾಗಿದೆ. ನಿನ್ನೆ ರಾತ್ರಿ 7.30ರ ವೇಳೆ ಪುತ್ತಿಗೆ ಮುಗು ರಸ್ತೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಈ ಇಬ್ಬರು ಆರೋಪಿಗಳನ್ನು ಬಂಧಿಸಿ ಅವರ ಕೈಯಲ್ಲಿದ್ದ ಮಾದಕದ್ರವ್ಯವನ್ನು ವಶಪಡಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ರಾತ್ರಿ ಹೊತ್ತಿನಲ್ಲಿ ಪಟ್ರೋಲಿಂಗ್ ನಡೆಸುತ್ತಿದ್ದ ವೇಳೆ ಎಸ್‌ಐ ಹಾಗೂ ಸಿವಿಲ್ ಪೊಲೀಸ್ ಆಫೀಸರ್ ಹರಿಪ್ರಸಾದ್, ಚಾಲಕ ಜಾಬಿರ್ ಎಂಬಿವರು ಮುಗುವಿಗೆ ತಲುಪಿದ್ದರು. ಪೊಲೀಸರ ವಾಹ ವನ್ನು ಕಂಡೊಡನೆ ರಸ್ತೆಬದಿಯಲ್ಲಿದ್ದ ಮುಹಮ್ಮದ್ ಫಸಲ್ ಹಾಗೂ ಅಬ್ದುಲ್ ನಿಝಾರ್ ಓಡಿ ಪರಾರಿ ಯಾಗಲು ಯತ್ನಿಸಿದ್ದಾರೆ. ಇದರಿಂದ ಸಂಶಯಗೊಂಡು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಹ್ಯಾಶಿಶ್ ಆಯಿಲ್ ಪತ್ತೆಯಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಸೆರೆಗೀಡಾದ ಮುಹಮ್ಮದ್ ಫಸಲ್ ವಿರುದ್ಧ ಕಾಸರಗೋಡು, ಕುಂಬಳೆ ಸಹಿತ ಹಲವು ಠಾಣೆಗಳಲ್ಲಿ ಕಳವು ಪ್ರಕರಣ ದಾಖಲಾಗಿದೆಯೆಂದೂ ಪೊಲೀಸರು ತಿಳಿಸಿದ್ದಾರೆ.







