ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರ ಬಳಿಯ ನಿವಾಸಿ ದಿ| ಕೃಷ್ಣ ಎಂಬವರ ಪುತ್ರ ಜಗದೀಶ ಸಾಲಿಯಾನ್ 42) ಹೃದಯಾಘಾತದಿಂದ ನಿಧನ ಹೊಂದಿದರು. ನಿನ್ನೆ ಸಂಜೆ ೫.೩೦ರ ವೇಳೆ ಮನೆಯಲ್ಲಿದ್ದ ಇವರಿಗೆ ಹೃದಯಾಘಾತವುಂಟಾಗಿದ್ದು, ಕೂಡಲೇ ಬದಿಯಡ್ಕದ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾ ಗಲಿಲ್ಲ. ಕಲ್ಲುಕಟ್ಟುವ ಮೇಸ್ತ್ರಿ ಕೆಲಸ ನಿರ್ವಹಿಸುತ್ತಿದ್ದ ಇವರಿಗೆ ಅಲ್ಪ ಕಾಲದಿಂದ ಅಸೌಖ್ಯ ಬಾಧಿಸಿತ್ತೆನ್ನ ಲಾಗಿದೆ.
ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರದ ಆಡಳಿತ ಸಮಿತಿ ಸದಸ್ಯರೂ ಆಗಿದ್ದ ಜಗದೀಶ ಸಾಲಿಯಾನ್ ಪ್ರಸ್ತುತ ಕ್ಷೇತ್ರದ ನವೀಕರಣ ಸಮಿತಿ ಯ ಉಪಾಧ್ಯಕ್ಷರಾಗಿದ್ದರು. ಸಿಪಿಎಂ ಕಾರ್ಯಕರ್ತನೂ ಆಗಿದ್ದರು. ಮೃತರು ತಾಯಿ ಸುಂದರಿ, ಸಹೋದರ- ಸಹೋದರಿಯರಾದ ಯೋಗೀಶ್ ಸಾಲಿಯಾನ್, ರವಿ ಕುಮಾರ್, ಚಂದ್ರಕಲಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






