ಕಾಸರಗೋಡು: ಆಭರಣ ಪ್ರೇಮಿಗಳು ಅತ್ಯಂತ ನಿರೀಕ್ಷೆಯಿಂದ ಕಾಯುತ್ತಿದ್ದ ‘ಹಿಸ್ತಾರ’ ಪ್ರೀಮಿಯಂ ಜ್ಯುವೆಲ್ಲರಿ ಎಕ್ಸಿಬಿಶನ್ ಕಾಸರಗೋಡು ಸಿಟಿ ಗೋಲ್ಡ್ ಶೋರೂಂನಲ್ಲಿ ಆರಂಭಗೊಂಡಿತು. ಕಾರ್ಯಕ್ರಮದಲ್ಲಿ ಗಣ್ಯರಾದ ಖದೀಜ ಜಾಫರ್, ಜಾಫರ್ ಕಮಾಲ್ ಎಂಬಿವರು ಜಂಟಿಯಾಗಿ ಉದ್ಘಾಟನೆ ನಿರ್ವಹಿಸಿದರು. ಸಿಟಿ ಗೋಲ್ಡ್ ಅಧ್ಯಕ್ಷರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ರಾಂಚ್ ಮೆನೇಜರ್ ತಂಜೀದ್, ನಿರ್ದೇಶಕರಾದ ಇರ್ಶಾದ್, ನೌಶಾದ್, ದಿಲ್ಶಾದ್ ಭಾಗವಹಿಸಿದರು.
ಎಕ್ಸಿಬಿಶನ್‌ನ ಮೊದಲ ಚಿನ್ನ ಮಾರಾಟವನ್ನು ಸಿ.ಎಂ. ಅಬ್ದುಲ್ ರಹಿಮಾನ್, ದ್ವಿತೀಯ ಚಿನ್ನಾಭರಣ ಮಾರಾಟವನ್ನು ಶುಹೈಬ್, ನಾಸಿಯಾ ಎಂಬಿವರಿಗೆ ನೀಡಿ ನಿರ್ವಹಿಸಿದರು. ಅಲ್ಲದೆ ಡೈಮಂಡ್ ಆಭರಣಗಳ ಮೊದಲ ಮಾರಾಟ ಹಸೀನಾ ರಹೀಂ, ದ್ವಿತೀಯ ಮಾರಾಟ ಶಹನಾ ಎ.ಕೆ. ಸ್ವೀಕರಿಸಿದರು. ವಿಶ್ವದ ವಿವಿಧ ಭಾಗಗಳಿಂದ ಪ್ರತ್ಯೇಕವಾಗಿ ಆಯ್ಕೆ ಮಾಡಿದ ಮನೋಹರ ಹಾಗೂ ವೈವಿಧ್ಯಮಯವಾದ ಪ್ರೀಮಿಯಂ ಆಭರಣಗಳ ವಿಫುಲ ಸಂಗ್ರಹ ಜುಲೈ ೧೫ರಿಂದ ಆರಂಭಿಸಿದ ಈ ಪ್ರದರ್ಶನ ದಲ್ಲಿ ಗ್ರಾಹಕರಿಗಾಗಿ ಸಿದ್ಧಪಡಿಸಲಾಗಿದೆ. ಎಕ್ಸಿಬಿಶನ್‌ನಂಗವಾಗಿ ಆಶ್ಚರ್ಯಕರ ಆಫರ್‌ಗಳು ಸಿಟಿ ಗೋಲ್ಡ್ ನೀಡುತ್ತಿದೆ. ಡೈಮಂಡ್ ಆಭರಣಗಳಿಗೆ ಕ್ಯಾರೆಟ್‌ಗೆ ೧೨ ಸಾವಿರ ರೂ. ರಿಯಾಯಿತಿ, ಪ್ರೀಮಿ ಯಂ ಚಿನ್ನಾಭರಣಗಳ ಮಜೂರಿಯಲ್ಲಿ ೪೦ ಶೇ. ವರೆಗೆ ಡಿಸ್ಕೌಂಟ್ ಗ್ರಾಹಕರಿಗೆ ಸ್ವಂತ ಮಾಡಬಹುದೆಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.





