ಕುಂಬಳೆ: ನಿರ್ಮಾಣ ಹಂತದ ಮನೆಯ ಸನ್‌ಶೇಡ್ ಕುಸಿದು ಬಿದ್ದು ಯುವಕ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಮೇಲಿನ ಕಳತ್ತೂ ರಿನ ಹಾರಿಸ್ (28) ಗಾಯಗೊಂಡಿದ್ದು, ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮೊನ್ನೆ ಸಂಜೆ ಘಟನೆ ನಡೆದಿದೆ. ಶ್ರೀನಗರ ರಸ್ತೆಯ ಶ್ರೀ ಧೂಮಾವತಿ ಭದ್ರಕಾಳಿ ಕ್ಷೇತ್ರ ಸಮೀಪ ಮಂಗಲ್ಪಾಡಿ ಪಂಚಾಯ ತ್‌ನ ಸಹಾಯದೊಂದಿಗೆ ಲೈಫ್ ಮಿಶನ್ ಯೋಜನೆ ಪ್ರಕಾರ ನಿರ್ಮಿಸುವ ಮನೆಯ ಸನ್‌ಶೇಡ್ ಕುಸಿದುಬಿದ್ದಿದೆ. ಹಾರಿಸ್ ಮನೆ ಸಮೀಪ ಹುಲ್ಲು ಹೆರೆಯುತ್ತಿದ್ದರು. ಈ ಹೊತ್ತಿನಲ್ಲಿ ಮನೆಯ ಸನ್ ಶೇಡ್ ಕುಸಿದು ಅವರ ಮೇಲೆ ಬಿದ್ದಿದೆ. ಬೊಬ್ಬೆ ಕೇಳಿ ತಲುಪಿದ ಸ್ಥಳೀಯರು ಹಾರಿಸ್‌ರನ್ನು ಆಸ್ಪತ್ರೆಗೆ ತಲುಪಿಸಿದ್ದಾರೆ.







