ಇಲಿ ವಿಷಬಿದ್ದ ಲೋಟದಲ್ಲಿ ನೀರು ಕುಡಿದ ಗೃಹಿಣಿ ದಾರುಣ ಸಾವು

ಹೊಸದುರ್ಗ: ಇಲಿಯನ್ನು ಕೊಲ್ಲಲು ವಿಷ ಇರಿಸುವ ಮದ್ಯೆ ಅಚಾತುರ್ಯದಿಂದ ವಿಷ ಬಿದ್ದ ಲೋಟೆಯಲ್ಲಿ ನೀರು ಕುಡಿದ ಗೃಹಿಣಿ ದಾರುಣವಾಗಿ ಮೃತಪಟ್ಟಿದ್ದಾರೆ. ರಾಜಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪನತ್ತಡಿ, ಕೋಳಿಚ್ಚಾಲ್ ಮೊಟ್ಟಂಕೊಚ್ಚಿ ನಿವಾಸಿ ಬಿ.ಪಿ. ಶೋಭನ (53) ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಜನವರಿ ೨೮ರಂದು ರಾತ್ರಿ ೯.೩೦ರ ವೇಳೆ ಇಲಿಯನ್ನು ಕೊಲ್ಲಲೆಂದು ವಿಷ ಇರಿಸಿದ್ದರು. ಈ ಮಧ್ಯೆ ಅಲ್ಪ ವಿಷ ಅಲ್ಲಿದ್ದ ಲೋಟೆಯೊಳಗ್ಗೆ ಬಿದ್ದಿತ್ತೆನ್ನಲಾಗಿದೆ. ಈ ವಿಷಯ ತಿಳಿಯದೆ ಶೋಭನಾ ಅದೇ ಗ್ಲಾಸ್‌ನಲ್ಲಿ ನೀರು ಸೇವಿಸಿರುವುದಾಗಿ ಹೇಳಲಾಗುತ್ತಿದೆ. ಬಳಿಕ ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾಜಪುರಂ ಪೊಲೀಸರು ಕೇಸು ದಾಖಲಿಸಿದ್ದಾರೆ. ಮೃತರು ಮಕ್ಕಳಾದ ಶನೀಶ್, ಸುಚಿತ್ರ, ಸೊಸೆ ಶಾಂತಿ, ಅಳಿಯ ಸನೀಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page