ಕಾಸರಗೋಡು: ಇಂಟರ್ವ್ಯೂ ಗೆಂದು ತಿಳಿಸಿ ಮನೆಯಿಂದ ಹೋದ ಬಳಿಕ ನಾಪತ್ತೆಯಾದ ಗೃಹಿಣಿ ಅನ್ಯ ಮತದ ಯುವಕನೊಂದಿಗೆ ಕಾಸರಗೋಡಿನಲ್ಲಿ ಸೆರೆಗೀಡಾಗಿದ್ದಾಳೆ. ತಳಿಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ ಕೂವೇರಿ ನಿವಾಸಿಯಾದ 42ರ ಹರೆಯದ ಗೃಹಿಣಿ ಚೆಂಗಳಾ ಯಿ ನಿವಾಸಿಯಾದ ಶಫೀರ್ ಎಂಬಾತನೊಂದಿಗೆ ಕಾಸರಗೋಡಿನಲ್ಲಿ ಪತ್ತೆಯಾಗಿದ್ದು ಅವರನ್ನು ನಗರಠಾಣೆ ಪೊಲೀಸರು ಕಸ್ಟಡಿಗೆ ತೆಗೆದು ತಳಿಪರಂಬ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ನವಂಬರ್ 7ರಂದು ಬೆಳಿಗ್ಗೆ ಇಂಟರ್ವ್ಯೂಗೆಂದು ತಿಳಿಸಿ ಗೃಹಿಣಿ ಹೋಗಿದ್ದಳು. ಬಳಿಕ ಮರಳಿ ಬಾರದ ಹಿನ್ನೆಲೆಯಲ್ಲಿ ಪತಿ ತಳಿಪರಂಬ ಪೊಲೀಸರಿಗೆ ದೂರು ನೀಡಿದ್ದರು. ಇದೇ ವೇಳೆ ಪರಾರಿಯಾ ಗುವುದರ ಎರಡು ದಿನಗಳ ಹಿಂದೆ ಗೃಹಿಣಿ ಶಫೀರ್ ವಿರುದ್ಧ ತಳಿಪರಂಬ ಪೊಲೀಸರಿಗೆ ದೂರು ನೀಡಿದ್ದಳು. ಶಫೀರ್ ಆರ್ಥಿಕವಾಗಿ ವಂಚಿಸಿದ್ದಾ ನೆಂದು ತಿಳಿಸಿ ದೂರು ನೀಡಿದ್ದು ಇದರಂತೆ ಕೇಸು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದ ವೇಳೆ ಗೃಹಿಣಿ ನಾಪತ್ತೆಯಾಗಿದ್ದಳು. ಪೊಲೀಸರು ನಡೆಸಿದ ತನಿಖೆಯಲ್ಲಿ ಗೃಹಿಣಿ ಶಫೀರ್‌ನೊಂದಿಗೆ ಹೋಗಿರುವುದಾಗಿ ಖಚಿತಪಡಿಸಲಾಗಿತ್ತು. ಸಂಬಂಧಿಕರಿಗೆ ಸಂಶಯ ಬಾರದಿರಲು ಯುವತಿ ಶಫೀರ್ ವಿರುದ್ಧ ಸುಳ್ಳು ದೂರು ನೀಡಿರುವುದಾಗಿ ಸಂಶಯಿಸ ಲಾಗುತ್ತಿದೆ. ಗೃಹಿಣಿ ಹಾಗೂ ಶಫೀರ್ ಸಾಮಾಜಿಕ ಜಾಲತಾಣದಲ್ಲಿ ಪರಿಚಯಗೊಂಡಿದ್ದರೆನ್ನಲಾಗಿದೆ.






