ಕೋಟ್ಟಯಂ: ಮನೆಯೊಡತಿಯ ಮೃತದೇಹ ಕುತ್ತಿಗೆ ಇರಿದು ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೋಟ್ಟಯಂ ತೆಲ್ಲಕಗತ್ ಎಂಬಲ್ಲಿ ಘಟನೆ ನಡೆದಿದೆ. ಇಲ್ಲಿನ ಜೋಸ್ ಚಾಕೋ ಎಂಬವರ ಪತ್ನಿ ಲೀನಾ ಜೋಸ್ (55) ಮೃತಪಟ್ಟವರು. ಇಂದು ಮುಂಜಾನೆ ವೇಳೆ ಮನೆಯ ಹಿಂದುಗಡೆ ಅಡುಗೆ ಕೋಣೆ ಸಮೀಪ ಮೃತದೇಹ ಪತ್ತೆಯಾಗಿದೆ. ಲೀನಾರ ಪುತ್ರ ಜೆರಿನ್ ತೋಮಸ್ ಇಂದು ಮುಂಜಾನೆ ಒಂದು ಗಂಟೆ ವೇಳೆ ಕೆಲಸ ಮುಗಿಸಿ ಮನೆಗೆ ತಲುಪಿದ್ದರು. ತಾಯಿ ಕಾಣದಿದ್ದಾಗ ಹುಡುಕಾಟ ನಡೆಸಿದ್ದು, ಈ ವೇಳೆ ಮೃತದೇಹ ಪತ್ತೆಯಾಗಿದೆ. ಈ ಸಂದರ್ಭದಲ್ಲಿ ಲೀನಾರ ಪತಿ ಜೋಸ್ ಚಾಕೋ, ಕಿರಿಯ ಪುತ್ರ ಥೋಮಸ್ ಜೋಸ್ ಮನೆಯಲ್ಲಿದ್ದರು. ಆದರೆ ಕಿರಿಯ ಪುತ್ರನಿಗೆ ಮಾನಸಿಕ ಅಸ್ವಸ್ಥತೆ ಇತ್ತೆನ್ನಲಾಗಿದೆ. ಘಟನೆ ಬಗ್ಗೆ ಶಂಕೆ ಮೂಡಿಬಂದಿದ್ದು, ಮೃತದೇಹದ ಮರಣೋತ್ತರ ಪರೀಕ್ಷೆಗಾಗಿ ಕೋಟ್ಟಯಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿದೆ.







