ಅಸೌಖ್ಯ: ಕಾಂಗ್ರೆಸ್ ಕಾರ್ಯಕರ್ತ ಮೃತ್ಯು

ನೀರ್ಚಾಲು: ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದ ಯುವಕ ಮೃತ ಪಟ್ಟರು. ಮಾನ್ಯ ಲಕ್ಷ್ಯಂವೀಡು ನಿವಾಸಿ ದಿವಂಗತರಾದ ಗುರುವ -ಮಾಣಿಕ್ಕ ದಂಪತಿ ಪುತ್ರ ವಿಶ್ವನಾಥ (46) ಮೃತಪಟ್ಟ ಯುವಕ. ಕೆಮ್ಮು ಹಾಗೂ ಉಸಿರಾಟ ತೊಂದರೆಯಿಂ ದಾಗಿ ಹಲವು ತಿಂಗಳುಗಳ ಕಾಲ ಚಿಕಿತ್ಸೆಯಲ್ಲಿದ್ದರು. ನಿನ್ನೆ ಮಧ್ಯಾಹ್ನ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಂಜೆ ವೇಳೆ ಸಾವು ಸಂಭವಿಸಿದೆ. ಕಾಂಗ್ರೆಸ್ ಕಾರ್ಯಕರ್ತನಾದ ವಿಶ್ವನಾಥ ಅವಿವಾಹಿತನಾಗಿದ್ದಾರೆ. ಮೃತರು ಸಹೋದರರಾದ ರಾಮಚಂದ್ರ, ಆನಂದ, ಶಂಕರ, ಸಂಜೀವ, ಸಹೋ ದರಿಯರಾದ ಕಮಲ, ಲೀಲಾವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಬದಿಯಡ್ಕ ಪೊಲೀಸರು ಮಹಜರು ನಡೆಸಿದ ಬಳಿಕ ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

RELATED NEWS

You cannot copy contents of this page