ಬಿಎಲ್‌ಒಗಳ ಕರ್ತವ್ಯ ನಿರ್ವಹಣೆಗೆ ಅಡಚಣೆ ಸೃಷ್ಟಿಸಿದಲ್ಲಿ 10 ವರ್ಷಗಳ ತನಕ ಸಜೆ

ಕಾಸರಗೋಡು; ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕ್ರಮದಂತೆ ಕರ್ತವ್ಯದಲ್ಲಿ ನಿರತರಾಗುವ ಬಿಎಲ್‌ಒ (ಬೂತ್ ಲೆವೆಲ್ ಆಫೀಸರ್)ಗಳ ಕರ್ತವ್ಯ ನಿರ್ವಹಣೆಗೆ ಅಡಚಣೆ ಸೃಷ್ಟಿಸಿದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾ ಗುವುದೆಂದು ಕೇಂದ್ರ ಚುನಾವಣಾ ಆಯೋಗದ ರಾಜ್ಯ ಆಯುಕ್ತ ರತನ್ ಯು. ಖೇಲ್ಕರ್ ತಿರುವನಂತಪುರ ದಲ್ಲಿ ಕರೆದ ಸುದ್ಧಿಗೋಷ್ಠಿಯಲ್ಲಿ ಮುನ್ನೆಚ್ಚರಿಕೆ ನೀಡಿದ್ದಾರೆ.

ಬಿಎಲ್‌ಒಗಳು ಸಂವಿಧಾನಾತ್ಮಕ ಕರ್ತವ್ಯಗಳನ್ನು ನಿರ್ವಹಿಸಲು ಚುನಾವಣಾ ಆಯೋಗ ನಿಯೋಜಿಸಿದ ಸಾರ್ವಜನಿಕ ಸೇವಕರಾಗಿದ್ದಾರೆ. ಆದ್ದರಿಂದ ಎಸ್‌ಐಆರ್ ನಡೆಸುವ ವೇಳೆ ಅವರಿಗೆ ಅಡಚಣೆ   ಉಂಟುಮಾಡಿದಲ್ಲಿ ಅದು ಹತ್ತು ವರ್ಷದ ತನಕ ಶಿಕ್ಷೆ ಲಭಿಸುವ ಒಂದು ಅಪರಾಧ ಕೃತ್ಯವಾಗಲಿದೆ ಎಂದು ಸ್ಪಷ್ಟಪಡಿಸಿರುವ ಆಯುಕ್ತರು ಅದರಿಂದಾಗಿ ಬಿಎಲ್ ಒಗಳಿಗೆ ಅಗತ್ಯದ ಸಂರಕ್ಷಣೆ ಒದಗಿಸುವಂ ತೆಯೂ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿ ಗಳಿಗೆ ನಿರ್ದೇಶ ನೀಡಿದ್ದಾರೆ. ಅಗತ್ಯವೆನಿಸಿದ್ದಲ್ಲಿ ಬಿಎಲ್‌ಒಗಳಿಗೆ ಪೊಲೀಸ್ ಸಂರಕ್ಷಣೆಯನ್ನು ಖಾತರಿ ಪಡಿಸಲಾಗುವುದು.

ಸಾಮಾಜಿಕ ಮಾಧ್ಯಮಗಳ ಅಥವಾ ಸೈಬರ್ ಮೂಲಕ ನಕಲಿ ಸುದ್ದಿ ಪ್ರಚಾರ ಮಾಡುವವರ ವಿರುದ್ಧ ಐಟಿ ಆಕ್ಟ್ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದೂ ಆಯುಕ್ತರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.

RELATED NEWS

You cannot copy contents of this page