ಪೈವಳಿಕೆ ನಗರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ನೂತನ ಕಟ್ಟಡ ಉದ್ಘಾಟನೆ

ಪೈವಳಿಕೆ: ಪೈವಳಿಕೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಗೆ ಕಿಫ್‌ಬಿ ನಿಧಿಯಿಂದ 3.90 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಹೊಸ ಕಟ್ಟಡವನ್ನು ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಿದರು. ಮೂರು ಮಹಡಿಗಳಲ್ಲಾಗಿ ಒಟ್ಟು 13 ತರಗತಿ ಕೊಠಡಿಗಳನ್ನು ಹೊಂದಿರುವ ಈ ಕಟ್ಟಡದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ತರಗತಿಗಳು ಆರಂಭವಾಗಲಿದೆ.

ಮಂಜೇಶ್ವರ ಬ್ಲೋಕ್ ಪಂ. ಅಧ್ಯಕ್ಷ ಯು.ಕೆ. ಸೈಫುಲ್ಲ ತಂಙಳ್ ಅಧ್ಯಕ್ಷತೆ ವಹಿಸುವರು. ಪಂಚಾಯತ್ ಅಧ್ಯಕ್ಷೆ ಬದ್ರುನ್ನೀಸ ಸಲೀಂ ಕಳಾಯಿ, ಬ್ಲೋಕ್ ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಮೋಹನ್ ರೈ, ಪಿಟಿಎ ಅಧ್ಯಕ್ಷ ಅಬ್ದುಲ್ ರಜಾಕ್ ಚಿಪ್ಪಾರು, ಪೈವಳಿಕೆ ಪಂ. ಉಪಾಧ್ಯಕ್ಷ ರಾಘವೇಂದ್ರ ಭಟ್, ಸಹಾಯಕ ಪ್ರಾಂಶುಪಾಲ ವಿಶ್ವನಾಥ್ ಕೆ. ಮಾತನಾಡಿದರು. ಪ್ರಾಂಶುಪಾಲ ರಘುರಾಮ ಆಳ್ವ ಸ್ವಾಗತಿಸಿ, ಮುಖ್ಯೋಪಾಧ್ಯಾಯಿನಿ ವತ್ಸಲ ಜಿ.ಎಸ್. ವಂದಿಸಿದರು.

You cannot copy contents of this page