ಕಾಸರಗೋಡು: ಉದ್ಯೋಗ ಖಾತರಿ ಯೋಜನೆಯನ್ನು ರದ್ದುಗೊಳಿ ಸಲು, ಗಾಂಧೀಜಿಯ ಹೆಸರನ್ನು ಯೋ ಜನೆಯಿಂದ ತೆರವುಗೊಳಿಸಲಿರುವ ಕೇಂದ್ರ ಸರಕಾರದ ಕ್ರಮದ ವಿರುದ್ಧ ಐಎನ್‌ಟಿಯುಸಿ ಕಾಸರಗೋಡು ವಿಧಾನಸಭಾ ಮಂಡಲ ಸಮಿತಿ ಪ್ರಧಾನ ಅಂಚೆ ಕಚೇರಿ ಎದುರಲ್ಲಿ ಮುಷ್ಕರ ಆಯೋಜಿಸಿತು. ಐಕ್ಯರಂಗದ ಜಿಲ್ಲಾ ಕಾರ್ಯದರ್ಶಿ ಎ. ಗೋ ವಿಂದನ್ ನಾಯರ್ ಉದ್ಘಾಟಿಸಿದರು. ವಿಧಾನಸಭಾ ಮಂಡಲ ಸಮಿತಿ ಅಧ್ಯಕ್ಷ ಸಿ.ಜಿ. ಟೋನಿ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕಾರ್ಯದರ್ಶಿ ಟಿ.ವಿ. ಕುಂಞಿರಾಮನ್, ಅರ್ಜುನನ್ ತಾಯಲಂಗಾಡಿ, ಪಿ.ಕೆ. ವಿಜಯನ್, ಶಿವಶಂಕರನ್, ಉಷಾ ಎಸ್, ವಿದ್ಯಾಶ್ರೀ, ಶಾಂತ ಕುಮಾರಿ, ಅಬೂಬಕ್ಕರ್, ಸುಬೈದ, ಶಶಿಕಲ, ರಾಜೇಶ್ವರಿ, ಚಂದ್ರನ್, ಅಬ್ದುಲ್ ಖಾದರ್ ಮಾತನಾಡಿದರು.







