ಕಾಸರಗೋಡು: ನಾಟಕ ಸ್ಪರ್ಧೆ ಯಲ್ಲಿ ಸತತ ನಾಲ್ಕನೇ ಬಾರಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಇರಿಯಣ್ಣಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಗಮನ ಸೆಳೆದಿದೆ. ಈ ವರ್ಷದ ಮ‘ಅರಣ’ ಪಾಚಿಲ್ ಎಂಬ ನಾಟಕ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ. ಸಮಾಜದಲ್ಲಿನ ಮೂಢನಂಬಿಕೆ ಹಾಗೂ ತಪ್ಪು ಧೋರಣೆಗಳ ಆಧಾರದಲ್ಲಿ ಸಾಯುಜ್ ರಚಿಸಿದ ನಾಟಕವನ್ನು ಮನುಪ್ರೀತ್, ಸಾಯುಜ್, ಅಭಿನವ್ ಎಂಬಿವರು ಸೇರಿ ನಿರ್ದೇಶಿಸಿದ್ದರು. ಇದು ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ. ಕಳೆದ ನಾಲ್ಕು ವರ್ಷಗಳಿಂದ ಈ ಶಾಲೆಯ ತಂಡ ರಾಜ್ಯಮಟ್ಟಕ್ಕೆ ಆಯ್ಕೆಯಾಗುತ್ತಿದೆ.







