ಕಳಾಯಿ ಹೊಳೆಯಿಂದ ಹೊಯ್ಗೆ ಕಳವು ಜೆಸಿಬಿ ವಶ; ಇಬ್ಬರ ವಿರುದ್ಧ ಕೇಸು

ಉಪ್ಪಳ: ಕಳಾಯಿ ಹೊಳೆಯಿಂ ದ ಅನಧಿಕೃತವಾಗಿ ಹೊಯ್ಗೆ ಸಂಗ್ರಹಿಸುತ್ತಿದ್ದ ಜೆಸಿಬಿಯನ್ನು ಮಂಜೇಶ್ವರ ಪೊಲೀಸರು ವಶಪಡಿಸಿ ಕೊಂಡಿದ್ದು, ಅಲ್ಲದೆ ಇಬ್ಬರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.

ನಿನ್ನೆ ಮಧ್ಯಾಹ್ನ ಹೊಳೆಯಿಂದ ಹೊಯ್ಗೆ ಸಂಗ್ರಹ ನಡೆಯುತ್ತಿರುವ  ಬಗ್ಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಇನ್‌ಸ್ಪೆಕ್ಟರ್ ಅಜಿತ್ ಕುಮಾರ್, ಎಸ್‌ಐಗಳಾದ ವೈಷ್ಣವ್ ರಾಮಚಂದ್ರನ್, ಉಮೇಶ್ ಕೆ.ಆರ್ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಹೊಯ್ಗೆ ಸಂಗ್ರಹಕ್ಕೆ ಬಳಲುತ್ತಿದ್ದ ಜೆಸಿಬಿ ವಶಪಡಿಸಲಾಗಿದೆ. ಇದರಂತೆ ಹೊಯ್ಗೆ  ಸಾಗಾಟ ನಡೆಸುವ ಆರೋಪದಂತೆ ಕುಂಜತ್ತೂರು ಮಾಸ್ಕೋ ಹಾಲ್ ಬಳಿಯ ಎಂ.ಡಿ. ಮೈಫ್ಯೂಸ್ ಅನ್ಸಾರಿ (37), ಹೊಯ್ಗೆ ಸಾಗಾಟಕ್ಕೆ ರಸ್ತೆ ಸೌಕರ್ಯ ಒದಗಿಸಿಕೊಟ್ಟ ಬೇರಿಕೆ ಕಳ್ಳಿಗೆಯ ಸದಾನಂದ ರೈ (55)ಎಂಬಿವರ ವಿರುದ್ಧ ಕೇಸು ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

You cannot copy contents of this page