ಇನ್ನು ನೆನಪಾಗಿ ಉಳಿಯಲಿರುವ ಕಾರಡ್ಕ ಶಾಲೆಯ ರಂಗಸ್ಥಳ

ಕಾಸರಗೋಡು: ಐದು ದಶಕಗಳ ಕಾಲ ಕಾರಡ್ಕದ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದ ವೇದಿಕೆಗೆ ಸ್ಥಳೀಯರ ನೇತೃತ್ವದಲ್ಲಿ ಕಣ್ಣೀರ ಕೋಡಿ ಮೂಲಕ ಬೀಳ್ಕೊಡುಗೆ ನೀಡಲಾಯಿತು. ಕೊನೆಯದಾಗಿ ಈ ವೇದಿಕೆಯಲ್ಲಿ ನಾಟಕ, ಯಕ್ಷಗಾನ, ಮಂಗಲಂಕಳಿ, ಜನಪದ ಹಾಡು ಮೊದಲಾದ ಕಾರ್ಯಕ್ರಮಗಳು ನಿನ್ನೆ ರಾತ್ರಿ ಜರಗಿದ್ದು, ಸ್ಥಳೀಯರಾದ ನೂರಾರು ಮಂದಿ ಭಾಗವಹಿಸಿದರು. ಕಾರಡ್ಕ ಜಿವಿಎಚ್‌ಎಸ್‌ಎಸ್‌ನಲ್ಲಿ ಸ್ಥಳೀ ಯರು ಹಾಗೂ ಸಾಂಸ್ಕೃತಿಕ ಕಾರ್ಯ ಕರ್ತರ ನೇತೃತ್ವದಲ್ಲಿ ೫೦ ವರ್ಷದ ಹಿಂದೆ ಈ ವೇದಿಕೆಯನ್ನು ನಿರ್ಮಿಸ ಲಾಗಿತ್ತು. ಇದರ ಬದಿಯಲ್ಲೇ ಈಗ ಹೊಸ ಶಾಲಾ ಕಟ್ಟಡ ನಿರ್ಮಾಣಗೊಂಡ ಹಿನ್ನೆಲೆಯಲ್ಲಿ ಈ ವೇದಿಕೆಯನ್ನು ಮುರಿದು ತೆಗೆಯಲು ತೀರ್ಮಾನಿಸಲಾಗಿತ್ತು. ಇದರಂತೆ ನಿನ್ನೆ ರಾತ್ರಿ ಕಾರ್ಯಕ್ರಮ ನಡೆಸಲಾಗಿದ್ದು, ಇನ್ನು ಈ ವೇದಿಕೆ ಒಂದು ನೆನಪು ಮಾತ್ರ.

RELATED NEWS

You cannot copy contents of this page