ಕರ್ನಾಟಕದ ವಿದ್ಯುತ್ ಮೊಟಕು: ಕಾಸರಗೋಡಿನಲ್ಲಿ ಪವರ್ ಕಟ್

ಕಾಸರಗೋಡು: ಕರ್ನಾಟಕ ದಿಂದಿರುವ ವಿದ್ಯುತ್ ವಿತರಣೆ ಯಲ್ಲಿ ಮೊಟಕು ಉಂಟಾದ ಕಾಸರಗೋಡು, ಮಂಜೇಶ್ವರ ತಾಲೂಕುಗಳಲ್ಲಿ ಸತತವಾಗಿ ವಿದ್ಯುತ್ ಮೊಟಕಾಗುತ್ತಿದೆ. ಗುರುವಾರ ಸಂಜೆ 5 ಗಂಟೆಗೆ ಕರ್ನಾಟಕದಿಂದಿರುವ 110 ಕೆವಿ ಲೈನ್‌ನಲ್ಲಿ ಸಮಸ್ಯೆ ಕಂಡು ಬಂದಿತ್ತು. ಇದನ್ನು ಪರಿಹರಿಸಲು ಹೆಚ್ಚು ಸಮಯ ಬೇಕಾಗಬ ಹುದೆಂದು ಕರ್ನಾಟಕದ ವಿದ್ಯುತ್ ಅಧಿಕಾರಿಗಳು ತಿಳಿಸಿದ ಹಿನ್ನೆಲೆಯಲ್ಲಿ ಕೇರಳದ ವಿದ್ಯುತ್ ನ್ನು ಕಾಸರಗೋಡು ಮಂಜೇಶ್ವರ ತಾಲೂಕುಗಳಲ್ಲಿ ವಿತರಿಸಬೇಕಾಗಿ ಬಂತು. ಸ್ಥಳೀಯ ಫೀಡರ್‌ಗಳಲ್ಲಿ 15 ನಿಮಿಷದ ಅಂತರದಲ್ಲಿ ಪವರ್ ಕಟ್ ಏರ್ಪಡಿಸಿ ವಿದ್ಯುತ್ ವಿತರಿಸಲಾಗಿದೆ. ನಿನ್ನೆ ಮಧ್ಯಾಹ್ನದ ವೇಳೆ ಕರ್ನಾಟಕದ ವಿದ್ಯುತ್ ಲಭಿಸಿದೆಯಾದರೂ ಮತ್ತೆಯೂ ಸಮಸ್ಯೆ ಕಂಡು ಬಂತು. ಕೆಲವು ಫೀಡರ್‌ಗಳಲ್ಲಿ ಓವರ್‌ಲೋಡ್ ಆದ ಹಿನ್ನೆಲೆ ಯಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿದೆ ಎಂದು ಸಂಬಂಧ ಪಟ್ಟವರು ತಿಳಿಸಿದ್ದಾರೆ.

RELATED NEWS

You cannot copy contents of this page