ಕುಂಬಳೆ: ಆರಿಕ್ಕಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಆರಂಭಗೊಳ್ಳುವುದರೊಂದಿಗೆ ಮಂಗಳೂರಿಗೆ ತೆರಳುವ ಪ್ರಯಾಣಿಕರು ಇನ್ನಷ್ಟು ಮೊತ್ತವನ್ನು ಇದಕ್ಕಾಗಿ ವ್ಯಯಿಸಬೇಕಾಗಿಬಂದಿದೆ. ಕರ್ನಾಟಕ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಇದರ ಹೆಸರಲ್ಲಿ ಪ್ರಯಾಣ ದರ ಹೆಚ್ಚಿಸಲಾಗಿದೆ. ಕಳೆದ ದಿನದಿಂದ ಹೆಚ್ಚಿಸಿದ ದರ ವಸೂಲಿ ಮಾಡಲಾ ಗುತ್ತಿದೆ. ಯಾವುದೇ ಮುನ್ಸೂಚನೆ ನೀಡದೆ ಪ್ರಯಾಣದರ ಹೆಚ್ಚಿಸಿರುವು ದಾಗಿಯೂ ಇದು ಪ್ರಯಾಣಿಕರಿಗೆ ಭಾರೀ ಹೊರೆಯಾಗಿ ದೆಯೆಂದು ದೂರಲಾಗಿದೆ. ಕುಂಬಳೆಯಿಂದ ಉಪ್ಪಳಕ್ಕೆ 18 ರೂಪಾಯಿಯಿದ್ದುದು ಈಗ ೨೫ ರೂಪಾಯಿಯಾಗಿ ಹೆಚ್ಚಳಗೊಂಡಿದೆ. ಕುಂಬಳೆಯಿಂದ ಮಂಗಳೂರಿಗೆ ೬೭ ರೂಪಾಯಿ ಇದ್ದುದು 75 ರೂಪಾ ಯಿಗೇರಿದೆ. ಕಾಸರಗೋಡಿನಿಂದ ಮಂಗಳೂರಿಗೆ 88 ರೂಪಾಯಿ ಇದ್ದುದು 95 ರೂಪಾಯಿಗೇರಿದೆ. ಇದೇ ವೇಳೆ ಕುಂಬಳೆಯಿಂದ ಮಂ ಗಳೂರಿಗೆ ರಾಜಹಂಸ ಬಸ್‌ನಲ್ಲಿ ಈ ಹಿಂದೆ 80 ರೂಪಾಯಿ ಇದ್ದುದು ಈಗ 90 ರೂಪಾಯಿಯಾಗಿ ಹೆಚ್ಚಳಗೊಂ ಡಿದೆ. ಟೋಲ್ ಸಂಗ್ರಹದ ಬೆನ್ನಲ್ಲೇ ಕರ್ನಾಟಕ ಸಾರಿಗೆ ಬಸ್‌ನಲ್ಲಿ ಪ್ರಯಾಣ ದರ ಹೆಚ್ಚಿಸಲಾಗಿದೆ. ಇದು ಕೆಎಸ್ ಆರ್‌ಟಿಸಿ ಬಸ್‌ಗಳನ್ನೇ ಆಶ್ರಯಿಸುವವರಿಗೆ ಭಾರೀ ಹೊಡೆತ ನೀಡಿದೆ. ಇದೇ ವೇಳೆ ಕೇರಳ ಎಸ್‌ಆರ್‌ಟಿಸಿ ದರ ಈಗ ಹೆಚ್ಚಿಸಿಲ್ಲ. ಶೀಘ್ರದಲ್ಲೇ ದರ ಹೆಚ್ಚಿಸಲಾಗುವು ದೆಂಬ ಸೂಚನೆಯು ಅಧಿಕಾರಿಗಳ ಭಾಗದಿಂದ ಉಂಟಾಗಿದೆ.







