ಮೊಗ್ರಾಲ್: ಮೂರು ದಿನಗಳಿಂದ ಜರಗುತ್ತಿದ್ದ ಜಿಲ್ಲಾ ಶಾಲಾ ಕಲೋ ತ್ಸವದಲ್ಲಿ ಹೊಸದುರ್ಗ ಉಪಜಿಲ್ಲೆ ಚಾಂಪ್ಯನ್ ಪಟ್ಟ ಗಳಿಸಿದೆ. ಮೊದಲ ದಿನದಿಂದಲೇ ಕಾಸರಗೋಡು ಉಪಜಿಲ್ಲೆ ಹಾಗೂ ಹೊಸದುರ್ಗ ಉಪಜಿಲ್ಲೆ ಜಿದ್ದಾಜಿದ್ದಿನ ಹೋರಾಟದೊಂದಿಗೆ ಮುಂದುವರಿದಿದ್ದು, ನಿನ್ನೆ ರಾತ್ರಿ 7 ಗಂಟೆಯಾಗುವಾಗ ಎರಡು ಉಪ ಜಿಲ್ಲೆಗಳಿಗೂ 935 ಅಂಕ ಲಭಿಸಿತ್ತು. ಉಳಿದಿದ್ದ 4 ಸ್ಪರ್ಧೆಗಳಲ್ಲಿ 2ರ ಫಲಿತಾಂಶ ಬಂದಾಗ ಕಾಸರಗೋಡು ಉಪಜಿಲ್ಲೆಗೆ 945, ಹೊಸದುರ್ಗ ಉಪಜಿಲ್ಲೆಗೆ 943 ಅಂಕ ಲಭಿಸಿತ್ತು. ಕೊನೆಯ ಎರಡು ಸ್ಪರ್ಧೆಗಳಲ್ಲಿ 10 ಅಂಕ ಗಳಿಸಿ ಹೊಸದುಗ ಚಾಂಪ್ಯನ್ ಪಟ್ಟ ತನ್ನ ಮುಡಿಗೇರಿಸಿಕೊಂಡಿತು. ಇದರೊಂದಿಗೆ 953 ಅಂಕ ಹೊಸದುರ್ಗಕ್ಕೂ, 945 ಅಂಕ ಕಾಸರಗೋಡು ಉಪಜಿಲ್ಲೆಗೂ ಲಭಿಸಿತು. ಚೆರುವತ್ತೂರು ಉಪಜಿಲ್ಲೆಗೆ 857 ಅಂಕ ಲಭಿಸಿದ್ದು, ಇದು ಮೂರನೇ ಸ್ಥಾನ ಗಳಿಸಿದೆ. ಕುಂಬಳೆ ಉಪಜಿಲ್ಲೆ 818, ಬೇಕಲ ಉಪಜಿಲ್ಲೆ 813, ಚಿತ್ತಾರಿಕಲ್ 717, ಮಂಜೇಶ್ವರ 623 ಅಂಕ ಗಳಿಸಿದೆ. ಕಳೆದ ಹಲವು ವರ್ಷಗಳಿಂದ ಹೊಸದುರ್ಗ ಉಪಜಿಲ್ಲೆ ಚಾಂಪ್ಯನ್ ಪಟ್ಟವನ್ನು ಗಳಿಸಿಕೊಳ್ಳುತ್ತಿದೆ.
ಶಾಲಾ ಮಟ್ಟದಲ್ಲಿ 236 ಅಂಕ ಗಳಿಸಿ ಕಾಞಂಗಾಡ್ ದುರ್ಗಾ ಹೈಯರ್ ಸೆಕೆಂಡರಿ ಶಾಲೆ ಓವರಾಲ್ ಕಿರೀಟವನ್ನು ಗಳಿಸಿದೆ. 194 ಅಂಕದೊA ದಿಗೆ ಚಟ್ಟಂಚಾಲ್ ಹೈಯರ್ ಸೆಕೆಂಡರಿ ಶಾಲೆ ದ್ವಿತೀಯ ಸ್ಥಾನ, 180 ಅಂಕ ದೊಂದಿಗೆ ಚಾಯೋತ್ ಜಿಎಚ್ಎಸ್ ಎಎಸ್ ತೃತೀಯ ಸ್ಥಾನ ಗಳಿಸಿದೆ.







