ತಾತ್ಕಾಲಿಕ ಉಪಕುಲಪತಿ ನೇಮಕಾತಿ: ರಾಜ್ಯಪಾಲರ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕೇರಳ ಸರಕಾರ

ತಿರುವನಂತಪುರ: ತಾಂತ್ರಿಕ ವಿಶ್ವ ವಿದ್ಯಾಲಯ ಮತ್ತು ಡಿಜಿಟಲ್ ವಿಶ್ವ ವಿದ್ಯಾಲಯಗಳಲ್ಲಿ ತಾತ್ಕಾಲಿಕ ಉಪ ಕುಲಪತಿಗಳನ್ನು ನೇಮಿಸಿದ ಕೇರಳ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಕೈಗೊಂಡ ಕ್ರಮವನ್ನು ಪ್ರಶ್ನಿಸಿ ಕೇರಳ ಸರಕಾರ ಸುಪ್ರೀಂಕೋರ್ಟ್‌ನ ಮೆಟ್ಟಿಲೇರಿದೆ.

ಈ ಎರಡು ವಿಶ್ವವಿದ್ಯಾಲಯಗಳಿಗೆ ತಾತ್ಕಾಲಿಕ ಉಪಕುಲಪತಿಗಳನ್ನು ನೇಮಿಸದಂತೆ ರಾಜ್ಯಸರಕಾರ ರಾಜ ಪಾಲರೊಡನೆ ಈ ಹಿಂದೆ ಕೇಳಿಕೊಂ ಡಿತ್ತು. ಅದನ್ನು ತಳ್ಳಿಹಾಕಿದ ರಾಜ್ಯ ಪಾಲರು ಈ ಎರಡು ವಿಶ್ವವಿದ್ಯಾಲ ಯಗಳಿಗೆ ತಾತ್ಕಾಲಿಕ ಉಪಕುಲಪತಿ ಗಳನ್ನು ನೇಮಿಸಿದ್ದು, ಇದು ರಾಜ್ಯ ಸರಕಾರವನ್ನು ಕೆಣಕಿಸುವಂತೆ ಮಾಡಿದೆ. ಆದ್ದರಿಂದ ಹೀಗೆ ತಾತ್ಕಾಲಿಕ ಉಪಕುಲಪತಿಗಳನ್ನು ನೇಮಿಸಿದ ರಾಜ್ಯಪಾಲರ ಆದೇಶವನ್ನು ರದ್ದು ಪಡಿಸಬೇಕೆಂದು ರಾಜ್ಯ ಸರಕಾರ ಈಗ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ರಾಜ್ಯಪಾಲರ ಇಂತಹ ಕ್ರಮ ಏಕಪಕ್ಷೀಯವಾದುದ್ದಾಗಿದೆ. ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಆಕ್ಟ್ 13(7)  ಸೆಕ್ಷನ್ ಪ್ರಕಾರವೂ ಡಿಜಿಟಲ್ ವಿಶ್ವವಿದ್ಯಾಲಯದ ಆಕ್ಟ್ 11(10)ರ ತಾತ್ಕಾಲಿಕ ಉಪಕುಲಪತಿಗಳನ್ನು ನೇಮಿಸಬೇಕೆಂದು ಸುಪ್ರೀಂಕೋರ್ಟ್ ಈ ಹಿಂದೆ ಸ್ಪಷ್ಟಪಡಿಸಿತ್ತು. ಇದಕ್ಕೆ ಕೇರಳ ಹೈಕೋರ್ಟ್ ಕೂಡಾ ಅಸ್ತು ನೀಡಿತ್ತು. ಇದರಂತೆ ಸರಕಾರ ನೀಡುವ ಪ್ಯಾನಲ್‌ಗೆ ಹೊಂದಿಕೊಂಡು ಮಾತ್ರವೇ ಉಪಕುಲಪತಿಗಳನ್ನು ರಾಜ್ಯಪಾಲರು ನೇಮಿಸಬಹುದಾಗಿದೆ. ಆದರೆ  ರಾಜ್ಯ ಪಾಲರು ಅದನ್ನು ಮೀರಿ ತಾತ್ಕಾಲಿಕ ಉಪಕುಲಪತಿಗಳ ನೇಮಕಾತಿ ನಡೆಸಿದ್ದಾರೆ. ಆದ್ದರಿಂದ ಅದನ್ನು ರದ್ದು ಪಡಿಸಬೇಕೆಂದು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಕೇರಳ ಸರಕಾರ ಆಗ್ರಹಪಟ್ಟಿದೆ.

You cannot copy contents of this page