ಕಾಸರಗೋಡು: ಅಡ್ಕತ್ತಬೈಲು ಕೋಟಿ ಚೆನ್ನಯ ಗರಡಿ ಕ್ಷೇತ್ರದ ಅರ್ಚಕ ರಮೇಶ್ (65 ನಿಧನಹೊಂದಿದರು. ಇಂದು ಬೆಳಿಗ್ಗೆ ಅಸೌಖ್ಯ ಕಾಣಿಸಿಕೊಂಡ ಇವರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಇವರಿಗೆ ಹೃದಯ ಸಂಬಂಧ ಅಸೌಖ್ಯ ವಿತ್ತೆನ್ನಲಾಗಿದೆ. ಮೃತರು ಪತ್ನಿ ಸುಮತಿ, ಪುತ್ರ ನವೀನ, ಸಹೋದರರಾದ ಭಾಸ್ಕರ, ಪದ್ಮನಾಭ, ಸಹೋದರಿ ಪುಷ್ಪಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಇಂದು ಸಂಜೆ ತರವಾಡು ಹಿತ್ತಿಲಿನಲ್ಲಿ ನಡೆಯಲಿದೆ.







