ಮಂಜೇಶ್ವರ: ಕೇರಳ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ (ಕೆ.ಎಸ್.ಟಿ.ಎ) ಮಂಜೇಶ್ವರ ಯೂನಿಟ್ ಸಮ್ಮೇಳನ ನಿನ್ನೆ ಹೊಸಂಗಡಿ ವ್ಯಾಪಾರಿ ಭವನದಲ್ಲಿ ನಡೆಯಿತು. ಕೆ.ಎಸ್.ಟಿ.ಎ ಯೂನಿಟ್ ಅಧ್ಯಕ್ಷ ಗಣೇಶ್ ಪಾವೂರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ. ಎಸ್. ಉದ್ಘಾಟಿಸಿದರು. ಮಂಜೇಶ್ವರ ವ್ಯಾಪಾರಿ ಏಕೋಪನ ಸಮಿತಿ ಅಧ್ಯಕ್ಷ ಬಶೀರ್, ತಾಲೂಕು ಕಾರ್ಯದರ್ಶಿ ಸತೀಶ್ ಆಚಾರ್ಯ, ವಿಶ್ವನಾಥ್ ಶೆಟ್ಟಿ ಕುತ್ತಾನಾಡಿ ಮಾತಾಡಿದರು. ಜೊತೆ ಕಾರ್ಯದರ್ಶಿ ಪ್ರೇಮಲತಾ ವರದಿ ಮಂಡಿಸಿದರು. ಪುರುಷೋತ್ತಮ ಆಚಾರ್ಯ ಲೆಕ್ಕ ಪತ್ರ ಮಂಡಿಸಿದರು. ಕೃಷ್ಣ ಕೆದುಂಬಾಡಿ, ಕಲಾವತಿ ಹೊಸಂಗಡಿ. ತಾಲೂಕು ಖಜಾಂಚಿ ವಿಜಯ ದೇವದಾಸ್, ಸ್ವಪ್ನ ಉದ್ಯಾವರ, ಸುಚಿತಾ ತೂಮಿನಾಡು, ಗೀತಾ ಮಂಜೇಶ್ವರ, ರೂಪಾ ಕೀರ್ತೇಶ್ವರ ಉಪಸ್ಥಿತರಿದ್ದರು. ನೂತನ ಕಮಿಟಿ ರೂಪೀಕರಿಸಲಾಯಿತು. ಅಧ್ಯಕ್ಷರಾಗಿ ಗಣೇಶ್ ಪಾವೂರು ಪುನರ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಪುರುಷೋತ್ತಮ ಆಚಾರ್ಯ, ಶರ್ಮಿಳಾ ವಿನಯ ಕುಮಾರ್, ಖಜಾಂಚಿಯಾಗಿ ಸ್ವಪ್ನ ಉದ್ಯಾವರ, ಕಾರ್ಯದರ್ಶಿಯಾಗಿ ಕುಮುದ ರಾಜ್, ಜೊತೆ ಕಾರ್ಯದರ್ಶಿಗಳಾಗಿ ಪ್ರೇಮಲತಾ, ಸುಚಿತಾ ತೂಮಿನಾಡು ಆಯ್ಕೆಯಾದರು. ಮಾಜಿ ಕಾರ್ಯದರ್ಶಿ ಸುಜಾತಾ ಉದ್ಯಾವರ ಅವರಿಗೆ ಶಾಲು ಹಾಕಿ ಸನ್ಮಾನ ಮಾಡಲಾ ಯಿತು. ಕುಮುದ ರಾಜ್ ಸ್ವಾಗತಿಸಿ, ಶರ್ಮಿಳ ವಿನಯ ಕುಮಾರ್ ವಂದಿಸಿದರು.







