ಕುಂಬಳೆ: ಕಳೆದ ಐದು ದಶಕಗಳಿಂದ ಪಂಚಾಯತ್ ಆಡಳಿತ ನಡೆಸುತ್ತಿರುವ ಐಕ್ಯರಂಗದ ಆಡಳಿತ ಸಮಿತಿ ಎಲ್ಲಾ ವಲಯಗಳಲ್ಲೂ ಅಭಿವೃದ್ಧಿರಹಿತ ಕೇರಳದ ಹಿಂದುಳಿದ ಪಂಚಾಯತ್ ಆಗಿ ಕುಂಬಳೆಯನ್ನು ಬದಲಿಸಿದೆ ಎಂದು ಎಡರಂಗ ಪಂಚಾಯತ್ ಸಮಿತಿ ಪದಾಧಿಕಾರಿಗಳು ಸುದ್ಧಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ವಿರೋಧ ಪಕ್ಷವಾದ ಬಿಜೆಪಿ ಐಕ್ಯರಂಗದ ಭ್ರಷ್ಟಾಚಾರ ವಿಷಯದಲ್ಲಿ ಮೌನ ಪಾಲಿಸುತ್ತಿದೆ ಎಂದು ಅವರು ಆರೋಪಿಸಿದರು. ಬಸ್ ತಂಗುದಾಣ, ಬೀದಿ ಬದಿ ವಿಶ್ರಾಂತಿ ಕೇಂದ್ರ, ಹೊಯ್ಗೆ ಕಡವ್ ಎಂಬಿವುಗಳಲ್ಲಿ ಭ್ರಷ್ಟಾಚಾರ ದಿಂದ ಆಡಳಿತ ಸಮಿತಿ ನಾಚಿಕೆ ಹೊಂದಿ ಚುನಾವಣೆಯನ್ನು ಎದುರಿಸ ಲಾಗದ ಸ್ಥಿತಿಯಲ್ಲಿದೆ. ಕಲ್ಯಾಣ ಯೋಜನೆಗಳನ್ನು ನಡೆಸುವುದರಲ್ಲಿ ಐಕ್ಯರಂಗದ ಆಡಳಿತ ಸೋಲು ಕಂಡಿದೆ ಎಂದು ಮುಖಂಡರು ಆರೋಪಿಸಿದರು. ಎಡರಂಗ ಸರಕಾರದ ಜನಕ್ಷೇಮ ಕರವಾದ ಯೋಜನೆಗಳನ್ನು ಮುಂದಿಟ್ಟು ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ಎಡರಂಗ ಬಹುಮತ ಗಳಿಸಲಿದೆ ಎಂದು ಅವರು ನುಡಿದರು.
ಚುನಾವಣೆ ಪ್ರಚಾರ ಕಾರ್ಯ ಗಳಿಗೆ ನಾಂದಿ ಹಾಡಿ ಇಂದು ಸಂಜೆ 4 ಗಂಟೆಗೆ ಕುಂಬಳೆ ಪೈ ಸಭಾಂಗಣದಲ್ಲಿ ಸಮಾವೇಷ ನಡೆಯಲಿದೆ. ಕೆ.ಆರ್. ಜಯಾನಂದ ಉದ್ಘಾಟಿಸುವರು. ಹಲವು ಮುಖಂಡರು ಭಾಗವಹಿಸುವರು. ಸ್ಪರ್ಧಿಸುವ ಅಭ್ಯರ್ಥಿಗಳ ಮೆರವಣಿಗೆ ಪೇಟೆಯಲ್ಲಿ ನಡೆಯಲಿದೆ. ಪಂಚಾ ಯತ್ನ 20 ವಾರ್ಡ್ಗಳಲ್ಲಿ ಸಿಪಿಎಂ ಅಭ್ಯರ್ಥಿಗಳು, 4 ವಾರ್ಡ್ಗಳಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿ ಸುವರು. ವಾರ್ಡ್ 3 (ಕಕ್ಕಳಕುನ್ನ್) – ಶಶಿಧರ ಪಡಿಕ್ಕಲ್, 4 (ಬಂಬ್ರಾಣ)- ಮುಹಮ್ಮದ್ ಇರ್ಫಾನ್, 5 (ಉಜಾರ್) -ಕೆ.ಕೆ. ಸುಮ, 6 (ಉಳುವಾರು)- ಆಯಿಷತ್ ರಸೂಲ, 7 (ಕಳತ್ತೂರು)- ಸುಕೇಶ್ ಭಂಡಾರಿ, 8 (ಇಚ್ಲಂಪಾಡಿ)- ಅಬ್ದುಲ್ ನಾಸಿರ್, 10 (ಮುಳಿಯಡ್ಕ)- ರಮೇಶ್ ಪಿ., 12 (ನಾರಾಯಣಮಂಗಲ) -ಅನಿತಾ ಪಿ. ನಾಯರ್, 16 (ಕೊಪ್ಪಳಂ)- ರಿಸಾನಾ ನಿಯಾಸ್, 17 (ಕೊಯ್ಪಾಡಿ)- ಅಬ್ದುಲ್ ಸಲೀಂ, 20 (ಬದ್ರಿಯಾನಗರ್) – ಅಬ್ದುಲ್ ರಿಯಾಸ್, 22 (ಮಾಟಂಗುಳಿ)- ಸುಲ್ಫತ್, 23 (ಕೋಟೆಕಾರ್)- ಮನೋಜ್ ಕುಮಾರ್ ಸಿ, 24 (ಶೇಡಿಕಾವ್)- ಸತೀಶ್ ಕುಮಾರ್.
ಇದೇ ವೇಳೆ ಕಾಸರಗೋಡು ಬ್ಲೋಕ್ ಪಂಚಾಯತ್ ಮೊಗ್ರಾಲ್ ಡಿವಿಷನ್ನಿಂದ ಅನಿಲ್ ಕುಮಾರ್ ಎಸ್, ಜಿಲ್ಲಾ ಪಂಚಾಯತ್ ಕುಂಬಳೆ ಡಿವಿಶನ್ನಿಂದ ಕೆ.ಬಿ. ಯೂಸಫ್ ಸ್ಪರ್ಧಿಸುವರು. ಈ ಬಗ್ಗೆ ಕುಂಬಳೆಯಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಸಿ.ಎ. ಸುಬೈರ್, ಕೆ.ಬಿ. ಯೂಸಫ್, ರತ್ನಾಕರ ಜಿ, ಸಿದ್ದಿಕ್ ಅಲಿ ಮೊಗ್ರಾಲ್, ಅಹಮ್ಮದಲಿ ಕುಂಬಳೆ, ರಘುರಾಮ್ ಛತ್ರಂಪಳ್ಳ, ತಾಜುದ್ದೀನ್ ಮೊಗ್ರಾಲ್ ಭಾಗವಹಿಸಿದರು.







