ಕುಂಬಳೆ: ಕುಂಟಂಗೇರಡ್ಕ ನಿವಾಸಿಯಾದ ಗಲ್ಫ್ ಉದ್ಯೋಗಿ ಚೇರಂಗೈಯಲ್ಲಿ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕುಂಟಂಗೇರಡ್ಕದ ಮೊಹಿಯುದ್ದೀನ್‌ರ ಪುತ್ರ ಮುಹಮ್ಮದ್ ಅಮಾನುಲ್ಲ (61) ಮೃತ ವ್ಯಕ್ತಿ. ನಿನ್ನೆ ರಾತ್ರಿ ೮.೩೦ರ ವೇಳೆ ಕಾಸರಗೋಡು ಚೇರಂಗೈ ರೈಲ್ವೇ ಹಳಿಯಲ್ಲಿ ಇವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ವಿಷಯ ತಿಳಿದು ಕಾಸರಗೋಡು ರೈಲ್ವೇ ಪೊಲೀಸರು ಸ್ಥಳಕ್ಕೆ ತಲುಪಿ ಮೃತದೇಹ ವನ್ನು ಜನರಲ್ ಆಸ್ಪತ್ರೆಯ ಶವಾಗಾ ರಕ್ಕೆ ತಲುಪಿಸಿದ್ದಾರೆ. ಒಂದು ವರ್ಷದ ಹಿಂದೆ ಅಮಾನುಲ್ಲ ಗಲ್ಫ್‌ನಿಂದ ಊರಿಗೆ ಬಂದಿದ್ದರು. ಮರಳಿ ಹೋಗುವ ಸಿದ್ಧತೆಯಲ್ಲಿದ್ದರೆನ್ನಲಾಗಿದೆ.
ಮೃತರು ಪತ್ನಿ ರಮ್ಲ, ಮಕ್ಕಳಾದ ಡಾ| ತಬ್ಶೀರ, ಶಾನಿಬ, ಸಹಲ, ಅಫೀಫ, ಸಹೋದರ ಸಹೋದರಿಯ ರಾದ ಹಬೀಬ್ ರಹ್ಮಾನ್, ಅಬ್ದುಲ್ ರಹೀಂ, ಅಹಮ್ಮದ್ ಶಾಫಿ, ಅಸ್ಲಾಂ, ಸುಬೈದ, ನಸೀಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






