ಯುಡಿಎಫ್ ಮಂಜೇಶ್ವರ ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿಯಾಗಿ ಲಕ್ಷ್ಮಣ ಪ್ರಭು ಕುಂಬಳೆ ನೇಮಕ

ಕುಂಬಳೆ: ಮಂಜೇಶ್ವರ ವಿಧಾನ ಸಭಾ ಕ್ಷೇತ್ರ ಯುಡಿಎಫ್ ಕಾರ್ಯ ದರ್ಶಿಯಾಗಿ ಕಾಂಗ್ರೆಸ್‌ನ ನೇತಾರ ಲಕ್ಷ್ಮಣ ಪ್ರಭು ಕುಂಬಳೆ ಆಯ್ಕೆಯಾಗಿ ದ್ದಾರೆ. ಜಿಲ್ಲಾ ಕಾಂಗ್ರೆಸ್ ಘಟಕ ಇವರನ್ನು ನೇಮಕಗೊಳಿಸಿದೆ. ಸ್ಥಳೀಯಾಡಳಿತ ಚುನಾವಣೆಯಲ್ಲಿ ಐಕ್ಯರಂಗದ ಪ್ರಚಂಡ ಗೆಲುವು ಹಿನ್ನೆಲೆಯಲ್ಲಿ ಇವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಡಿಸಿಸಿ ಈ ನೇಮಕಾತಿ ನಡೆಸಿದೆ.

ಕಾಂಗ್ರೆಸ್ ಕುಂಬಳೆ ಪಂ. ಘಟಕ ಉಪಾಧ್ಯಕ್ಷ, ಐಎನ್‌ಟಿಯುಸಿ ಮಂಡಲ ಅಧ್ಯಕ್ಷ, ಬ್ಲೋಕ್ ಕಾಂಗ್ರೆಸ್ ಉಪಾಧ್ಯಕ್ಷ, ಬ್ಲೋಕ್ ಅಧ್ಯಕ್ಷ ಮೊದಲಾದ ಹುದ್ದೆಗಳಲ್ಲಿ ಇವರು ಸೇವೆ ಸಲ್ಲಿಸಿದ್ದರು. ಪುತ್ತಿಗೆ ಜಿಲ್ಲಾ ಪಂಚಾಯತ್ ಡಿವಿಶನ್‌ನಿಂದ ಯುಡಿಎಫ್ ಗೆಲುವು ಸಾಧಿಸಲು ಹಾಗೂ ಕಾಸರಗೋಡು ಬ್ಲೋಕ್ ಪಂ.ನ ಮೊಗ್ರಾಲ್ ಡಿವಿಶನ್ ೨ರಲ್ಲಿ ಯುಡಿಎಫ್ ಗೆಲುವಿಗೆ ಇವರ ಕೊಡುಗೆ ನಿರ್ಣಾಯಕವಾಗಿತ್ತೆಂದು ಪಕ್ಷ ಅಭಿಪ್ರಾಯಪಟ್ಟಿದ್ದು, ಆ ಹಿನ್ನೆಲೆಯಲ್ಲಿ ಇವರಿಗೆ ನೂತನ ಜವಾಬ್ದಾರಿ ನೀಡಲಾಗಿದೆ.

RELATED NEWS

You cannot copy contents of this page