ರೈಲಿನಲ್ಲಿ ಬಾಯಾರು ನಿವಾಸಿಯ ಲ್ಯಾಪ್‌ಟೋಪ್ ಕಳವು

ಕಾಸರಗೋಡು: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬಾಯಾರು ಬಳಿಯ ನಿವಾಸಿಯ ಲಾಪ್‌ಟಾಪ್ ಕಳವಿಗೀಡಾದ ಬಗ್ಗೆ ದೂರಲಾಗಿದೆ.  ಬಾಯಾರು ಬಳ್ಳೂರು ನಿವಾಸಿ  ಇಬ್ರಾಹಿಂ ಇಹ್‌ಸಾನ್  ನೀಡಿದ ದೂರಿನಂತೆ ರೈಲ್ವೇ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.  ನಿನ್ನೆ ಮಧ್ಯಾಹ್ನ 2 ಗಂಟೆ ವೇಳೆ ಏರನಾಡ್ ಎಕ್ಸ್‌ಪ್ರೆಸ್‌ನಲ್ಲಿ  ಪ್ರಯಾಣಿಸುತ್ತಿದ್ದ ದೂರುಗಾರನ ಸುಮಾರು 80 ಸಾವಿರ ರೂ. ಮೌಲ್ಯದ  ಲಾಪ್‌ಟಾಪ್ ಒಳಗೊಂಡ ಬ್ಯಾಗ್ ಕಳವಿಗೀಡಾಗಿರುವುದಾಗಿ ದೂರಲಾಗಿದೆ. ಕಣ್ಣೂರು ರೈಲ್ವೇ ನಿಲ್ದಾಣಕ್ಕೆ ತಲುಪಿದಾಗ ಬ್ಯಾಗ್ ಕಳವಿಗೀಡಾದ ಬಗ್ಗೆ ತಿಳಿದುಬಂದಿತ್ತೆನ್ನಲಾಗಿದೆ.

RELATED NEWS

You cannot copy contents of this page