ಎಲ್‌ಡಿಎಫ್‌ನ  ಅಭಿವೃದ್ಧಿ ಮುನ್ನಡೆ ಜಾಥಾಕ್ಕೆ ಅದ್ದೂರಿಯ ಚಾಲನೆ

ಕುಂಬಳೆ: ಕೇಂದ್ರ ಮುಂಗಡಪತ್ರದಲ್ಲಿ ಕೇರಳದ ಯಾವುದೇ ಬೇಡಿಕೆಗಳನ್ನು ಪರಿಗಣಿಸಿಲ್ಲ.  ಕೇರಳವನ್ನು ನಿರ್ಲಕ್ಷಿಸಲು ಈ ರಾಜ್ಯ ಯಾವುದರಲ್ಲಿ ಅನರ್ಹತೆಹೊಂ ದಿದೆಯೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಶ್ನಿಸಿದ್ದಾರೆ. ನಿನ್ನೆ ಕುಂಬಳೆ ಯಿಂದ ಆರಂಭಗೊಂಡ ಎಲ್‌ಡಿಎಫ್‌ನ  ಉತ್ತರ ಕೇರಳ ಅಭಿವೃದ್ಧಿ ಮುನ್ನಡೆ ಜಾಥಾವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. 

 ಕೇರಳದಲ್ಲಿ ಕಡಲಾಮೆಗಳು ಮಾತ್ರವಲ್ಲ ಇರುವುದೆಂದು ತಿಳಿಸಿದ ಮುಖ್ಯಮಂತ್ರಿ, ಕೇರಳದೊಂದಿಗೆ ಕೇಂದ್ರ ಹೊಂದಿರುವ ನಿಲುವಿನಲ್ಲಿ ಯಾವುದೇ ಬದಲಾವಣೆ ಉಂಟಾಗಿಲ್ಲವೆಂದೂ   ತಿಳಿಸಿದರು. ಇದರ ಜೊತೆಗೆ ಕೇರಳದಲ್ಲಿ 2016ರಿಂದ ನಡೆದ ಅಭಿವೃದ್ಧಿ ಚಟುವಟಿಕೆಗಳನ್ನು ಮುಖ್ಯಮಂತ್ರಿ ವಿವರಿಸಿದರು. ಶಿಕ್ಷಣ ರಂಗದಲ್ಲಿ 10 ವರ್ಷ ಹಿಂದಿನ ಸ್ಥಿತಿ ಏನಾಗಿತ್ತು?  ಈಗಿನ ಸ್ಥಿತಿ ಹೇಗಿದೆ? ತರಗತಿ ಕೊಠಡಿಗಳು  ಸ್ಮಾರ್ಟ್ ಕ್ಲಾಸ್ ರೂಂಗಳಾಗಿ ಬದಲಾಗಿಲ್ಲವೇ? ಶಾಲೆಗಳು ಹೈಟೆಕ್ ಆಗಲಿಲ್ಲವೇ ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು. ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂ ದನ್ ನೇತೃತ್ವ ನೀಡುವ  ಉತ್ತರ ಕೇರಳ ಜಾಥಾ ವಿವಿಧ ಮಂಡಲಗಳಲ್ಲಿ ಸ್ವಾಗತ ಬಳಿಕ ಜಾಥಾ ಈ ತಿಂಗಳ 16ರಂದು ಪಾಲಕ್ಕಾಡ್ ಜಿಲ್ಲೆಯ ತರೂರ್‌ನಲ್ಲಿ ಸಮಾಪ್ತಿಗೊಳ್ಳಲಿದೆ.  ಜಾಥಾದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಇ. ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದರು. ಜಾಥಾ ಮೆನೇಜರ್ ಪಿ. ಸಂತೋಷ್ ಕುಮಾರ್,  ಪಿ. ಕರುಣಾಕರನ್, ಎಂ.ವಿ. ಬಾಲಕೃಷ್ಣನ್, ಕೆ.ಪಿ. ಸತೀಶ್ಚಂದ್ರನ್, ಎಂ.ವಿ. ಜಯರಾಜನ್, ಶಾಸಕರಾದ ಎಂ. ರಾಜಗೋಪಾಲನ್, ಸಿ.ಎಚ್. ಕುಂಞಂಬು, ಸಿ.ಪಿ. ಬಾಬು, ಸತ್ಯನ್ ಮೊಖೇರಿ, ವಿ.ಪಿ.ಆರ್. ವೇಶಾಲ ಸಹಿತ ಎಡರಂಗದ  ಘಟಕ ಪಕ್ಷಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.ಜಾಥಾಕ್ಕೆ ಬಳಿಕ ಕಾಸರಗೋಡು ನುಳ್ಳಿಪ್ಪಾಡಿಯಲ್ಲಿ ಸ್ವಾಗತ ನೀಡಲಾಯಿತು. ಇಂದು ಬೆಳಿಗ್ಗೆ ಪೆರಿಯಾಟಡ್ಕದಿಂದ ಹೊರಟ ಜಾಥಾ ಅಪರಾಹ್ನ 3 ಗಂಟೆಗೆ ಕಾಞಂಗಾಡ್ ಕೋಟಚ್ಚೇರಿಯಲ್ಲಿ, ಬಳಿಕ ಬಳಿಕ ಕಾಲಿಕಡವ್‌ನಲ್ಲಿ  ಸ್ವಾಗತ ನೀಡಲಾಗುವುದು. ಅನಂತರ ಜಾಥಾ ಕಣ್ಣೂರು ಜಿಲ್ಲೆಗೆ ಪ್ರವೇಶಿಸಲಿದೆ.

You cannot copy contents of this page