ಲೀಗ್ ನೇತಾರ ನಿಧನ

ಕುಂಬಳೆ: ಲೀಗ್ ನೇತಾರ ನಾದ  ಕುಂಬಳೆ ಬದ್ರಿಯಾನಗರದ ಸೈನುದ್ದೀನ್ (68) ನಿನ್ನೆ ರಾತ್ರಿ ಸ್ವ-ಗೃಹದಲ್ಲಿ ನಿಧನಹೊಂದಿದರು.  ಇವರಿಗೆ ಅಲ್ಪಕಾಲದಿಂದ ಅಸೌಖ್ಯ ಬಾಧಿಸಿದ್ದು,  ಚಿಕಿತ್ಸೆ ಪಡೆಯುತ್ತಿ ದ್ದರು.  ಮುಸ್ಲಿಂ ಲೀಗ್ ಬದ್ರಿಯಾ ನಗರ ವಾರ್ಡ್ ಮಾಜಿ ಅಧ್ಯಕ್ಷ, ಮಂಡಲ ಕಾರ್ಯದರ್ಶಿಯಾಗಿದ್ದ   ಇವರು ರಿಯಾದ್ ಕೆಎಂಸಿಸಿಯ  ಮಾಜಿ ನೇತಾರನಾಗಿದ್ದಾರೆ.

ಮೃತರು ಪತ್ನಿ ಆತಿಕ, ಮಕ್ಕಳಾದ ಅಸೀಂ, ಸಮೀರ, ತಾಹಿರ, ಮುನೀರ, ಅಳಿಯಂದಿ ರಾದ ದಾವೂದ್, ಆಶಿಫ್, ಮುಕ್ತಾರ್, ಸಹೋದರ-ಸಹೋ ದರಿಯರಾದ  ಮೊಹಮ್ಮದ್, ಇಬ್ರಾಹಿಂ, ಅಂದಾನಿ, ಆಯಿಶಾಬಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page