ಪೆರಿಯ ಬಳಿ ಚಿರತೆಯನ್ನು ಹೋಲುವ ಪ್ರಾಣಿ ಪತ್ತೆ

ಕಾಸರಗೋಡು : ಪೆರಿಯ ಬಳಿ ಯ ಆಯಂಬಾರ ಉರುಳಂಕೋಡಿ ಎಂಬಲ್ಲಿ ಚಿರತೆಯನ್ನು ಹೋಲುವ ಪ್ರಾಣಿ ಕಾಣಿಸಿಕೊಂಡಿರುವುದಾಗಿ ವರದಿಯಾಗಿದೆ. ನಿನ್ನೆ ಸಂಜೆ ೫.೩೦ರ ವೇಳೆ ಉರುಳಂಕೋಡಿಯ ಕಂಗಿನ ತೋಟದಲ್ಲಿ ವನ್ಯಜೀವಿ ಪ್ರತ್ಯಕ್ಷಗೊಂಡಿದೆ.  ಈ ವೇಳೆ ಅಲ್ಲಿದ್ದ ತೋಟದ ಮಾಲಕ ಆ ಪ್ರಾಣಿಯ ದೃಶ್ಯವನ್ನು ತನ್ನ ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿದಿದ್ದಾರೆ. ಪ್ರಾಣಿ  ಯಾವುದೆಂದು ಖಚಿತಪಡಿಸಲು ವೀಡಿಯೋವನ್ನು ಅರಣ್ಯಇಲಾಖೆ ಅಧಿಕಾರಿಗಳಿಗೆ ಕಳುಹಿಸಿಕೊಡ ಲಾಗಿದೆ. ಅಡಿಕೆ ತೋಟ ಸಮೀಪದ ತೋಡಿನಿಂದ ಹತ್ತಿ ಬಂದ ಪ್ರಾಣಿ ತೋಟದ ಬದಿಯಲ್ಲಾಗಿ ನಡೆದು ಹೋಗಿದೆ.  ಇದೇ ವೇಳೆ  ತೋಟದಲ್ಲಿ ಕಂಡುಬಂದಿರುವುದು ಗಂಡು ಚಿರತೆಯಾಗಿರಲು ಸಾಧ್ಯತೆ ಇದೆಯೆಂದು ಕೆಲವರು ತಿಳಿಸುತ್ತಿದ್ದಾರೆ. ಆದರೆ ವೀಡಿಯೋದಲ್ಲಿರುವುದು ಚಿರತೆಯಲ್ಲವೆಂದೂ ಅದು ಕಾಡುಬೆಕ್ಕಾಗಿದೆಯೆಂದು ಇನ್ನು ಕೆಲವರು ತಿಳಿಸುತ್ತಿದ್ದಾರೆ.

ಇದೇ ವೇಳೆ  ವೀಡಿಯೋದಲ್ಲಿ ಕಾಣುವ ಪ್ರಾಣಿ ಹೆಚ್ಚು ಎತ್ತರವಿದ್ದು, ಇಂತಹ ಕಾಡುಬೆಕ್ಕುಗಳು ಜಿಲ್ಲೆಯಲ್ಲಿಲ್ಲವೆಂದೂ ಕೆಲವರು ಹೇಳುತ್ತಿದ್ದಾರೆ. ಉರುಳಂ ಕೋಡಿಯಲ್ಲಿ ಚಿರತೆಯನ್ನು ಹೋಲುವ ಪ್ರಾಣಿ ಕಂಡುಬಂದಿರು ವುದು   ನಾಡಿನಲ್ಲಿ ಆತಂಕ ಮೂಡಿಸಿದೆ.

You cannot copy contents of this page