ಜಾಗತಿಕ ಸೇವಾರಂಗದಲ್ಲಿ ಲಯನ್ಸ್ ಕಾರ್ಯಕರ್ತರು 15 ಲಕ್ಷಕ್ಕೇರುವ ನಿರೀಕ್ಷೆ

ಕಾಸರಗೋಡು: ಲಯನ್ಸ್ ಡಿಸ್ಟ್ರಿಕ್ಟ್ 318 ಇ ಇದರ ಆಶ್ರಯದಲ್ಲಿ ರಿವ್ಯೂ ಆಂಡ್ ರೈಸ್ ಎಂಬ ಕಾರ್ಯಕ್ರಮ ಕಣ್ಣೂರು ಹೋಟೆಲ್ ಗ್ರಾಂಡ್ ಬಿನಾಲೆಯಲ್ಲಿ ಜರಗಿತು. ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ, ವಯನಾಡ್, ಮಾಹಿ ಎಂಬೀ ಜಿಲ್ಲೆಗಳಿಂದಿರುವ 170 ಕ್ಲಬ್‌ಗಳ ಪದಾಧಿಕಾರಿಗಳು ಭಾಗವಹಿ ಸಿದರು. ಕೇರಳ ಲಯನ್ಸ್ ಮಲ್ಟಿಪಲ್ ಕೌನ್ಸಿಲ್ ಕಾರ್ಯದರ್ಶಿ ಜೇಮ್ಸ್ ವಳಪ್ಪಿಲ್ ಪ್ರಧಾನ ಭಾಷಣ ಮಾಡಿ 2027ರಲ್ಲಿ ಮಿಷನ್ 1.5 ಮಿಲಿಯನ್ ಮೂಲಕ ಲಯನ್ಸ್ ಇಂಟರ್ ನ್ಯಾಶನಲ್‌ನ ಸೇವಾ ಕರಗಳನ್ನು 15 ಲಕ್ಷಕ್ಕೆ ತಲುಪಿಸಲಾಗುವುದೆಂದು ತಿಳಿಸಿದರು. ಲಯನ್ಸ್ ಡಿಸ್ಟ್ರಿಕ್ಟ್ ಮೆಂಬರ್‌ಶಿಪ್ ಕೋ-ಆರ್ಡಿನೇಟರ್ ಬಿಜೋಯ್ ಎಸ್. ನಂಬ್ಯಾರ್ ಅಧ್ಯಕ್ಷತೆ ವಹಿಸಿದ್ದು, ಜಿಲ್ಲಾ ಗವರ್ನರ್ ರವಿ ಗುಪ್ತ ಉದ್ಘಾಟಿಸಿದರು. ಬಳಿಕ ನಡೆದ ಸೆಮಿನಾರ್‌ಗೆ ಲಯನ್ಸ್ ಕೇರಳ -ಕರ್ನಾಟಕ ಗ್ಲೋಬಲ್ ಆಕ್ಷನ್ ಟೀಮ್ ಏರಿಯಾ ಲೀಡರ್ ನ್ಯಾಯವಾದಿ ಎ.ವಿ. ವಾಮನ ಕುಮಾರ್ ನೇತೃತ್ವ ನೀಡಿದರು. ಜಿಲ್ಲಾ ವೈಸ್ ಗವರ್ನರ್ ಪಿ.ಎಸ್. ಸೂರಜ್, ಮಾಜಿ ಗವರ್ನರ್ ಡಾ. ಸುಚಿತ್ರಾ ಸುಧೀರ್, ಚಾರ್ಟೆಡ್ ಅಕೌಂಟೆಂಟ್ ಪಿ. ಶಿವಪ್ರಸಾದ್, ಕೆ. ಸುಜಿತ್, ಡಾ. ಒ.ವಿ. ಸನಲ್, ರಜೀಶ್ ಟಿ.ಕೆ, ಶ್ರೀನಿವಾಸ ಪೈ ಮಾತನಾಡಿದರು. ಸಭೆಯಲ್ಲಿ ಕಣ್ಣೂರು ಜಿಲ್ಲೆಯಿಂದ ಕಳೆದ ತ್ರಿಸ್ತರ ಚುನಾವಣೆಯಲ್ಲಿ ಜಯ ಗಳಿಸಿದ ಲಯನ್ಸ್ ಸದಸ್ಯರಾದ ಪ್ರಿನ್ಸಿ ಬೋಬಿ ಜೋರ್ಜ್, ಸತೀಶನ್ ಕಾರ್ತಿಕಪಳ್ಳಿ, ಮಂಬರಂ ದಿವಾಕರನ್, ದೀಪು ಶ್ರೀಜಿತ್, ಕೆ.ಎಂ. ಶ್ರೀನಾಥನ್ ಎಂಬಿವರನ್ನು ಅಭಿನಂದಿಸಲಾಯಿತು.

ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ವಿಶೋಬ್ ಪನಂಗಾಡ್ ಸ್ವಾಗತಿಸಿ, ಜಿಲ್ಲಾ ಎಕ್ಸಿಕ್ಯೂಟಿವ್ ಕ್ಯಾಬಿನೆಟ್ ಕಾರ್ಯದರ್ಶಿ ರಿಜಾ ಗುಪ್ತ, ಜಿಇಟಿ ಕೋ-ಆರ್ಡಿನೇಟರ್ ಬಿಜಿತ್ ಕುಳಂಙರತ್, ಮಾರ್ಕೆಟಿಂಗ್ ಆಂಡ್ ಕಮ್ಯೂನಿಕೇಶನ್ ಚೆಯರ್‌ಮೆನ್ ಶಾಜಿ ಜೋಸೆಫ್, ಜಿಲ್ಲಾ ಕೋ-ಆರ್ಡಿನೇಟರ್ ವತ್ಸಲಾ ಗೋಪಿನಾಥ್ ಶುಭ ಕೋರಿದರು. ಹೆಚ್ಚು ಸದಸ್ಯರನ್ನು ಸೇರಿಸಿದ ಕ್ಲಬ್ ಪದಾಧಿಕಾರಿಗಳನ್ನು ಗೌರವಿಸಲಾಯಿತು. ಜಿಲ್ಲಾ ಕ್ಯಾಬಿನೆಟ್ ಕೋಶಾಧಿಕಾರಿ ಪಿ.ಎಂ. ಶಾನವಾಸ್ ವಂದಿಸಿದರು.

You cannot copy contents of this page