ಬೆಜ್ಜಂಗಳದಲ್ಲಿ ಅಬಕಾರಿ ಕಾರ್ಯಾಚರಣೆ: 133.92 ಲೀಟರ್ ಮದ್ಯ, 24 ಲೀ. ಬಿಯರ್ ವಶ; ದುರ್ಗಿಪಳ್ಳ ನಿವಾಸಿ ಸೆರೆ

ಕಾಸರಗೋಡು: ಓಣಂ ಸ್ಪೆಷಲ್ ಡ್ರೈವ್‌ನಂಗವಾಗಿ ಅಬಕಾರಿ ಇಲಾಖೆ ನಡೆಸಿದ ದಾಳಿಯಲ್ಲಿ ಕಾರಿನಲ್ಲಿ ಸಾಗಿಸಲೆತ್ನಿಸಿದ ವಿದೇಶ ಮದ್ಯ ಹಾಗೂ ಬಿಯರ್ ವಶಪಡಿಸಲಾ ಗಿದೆ. ಈ ಪ್ರಕರಣದಲ್ಲಿ ಓರ್ವ ಸೆರೆಯಾಗಿದ್ದಾನೆ. ನಿನ್ನೆ ಅಪರಾಹ್ನ ೨.೩೦ರ ವೇಳೆಗೆ ಮೀಂಜ ಬೆಜ್ಜಂಗಳ ದಲ್ಲಿ ನಡೆದ ವಾಹನ ತಪಾಸಣೆ ಮಧ್ಯೆ ಮದ್ಯ ಸಾಗಾಟ ಪತ್ತೆಹಚ್ಚಲಾಗಿದೆ.

ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್ ಸರ್ಕಲ್ ಇನ್ಸ್‌ಪೆಕ್ಟರ್ ಜಿ. ಕೃಷ್ಣ ಕುಮಾರ್‌ರ ನೇತೃತ್ವದಲ್ಲಿನ ತಂಡ ಹಾಗೂ ಕುಂಬಳೆ ಅಬಕಾರಿ ತಂಡ ಜಂಟಿಯಾಗಿ ನಡೆಸಿದ ದಾಳಿಯಲ್ಲಿ 133.92 ಲೀಟರ್ ಕರ್ನಾಟಕ ಮದ್ಯ, 24 ಲೀಟರ್ ಬಿಯರ್ ಕಾರಿನಿಂದ ಪತ್ತೆಹಚ್ಚಲಾಗಿದೆ. ಘಟನೆಗೆ ಸಂಬಂಧಿಸಿ ದುರ್ಗಿಪಳ್ಳ ನಿವಾಸಿ ಗಣೇಶ್ (43)ನನ್ನು ಸೆರೆ ಹಿಡಿಯಲಾಗಿದೆ. ಮಾಲು ಕಸ್ಟಡಿಗೆ ತೆಗೆದು ಆರೋಪಿ ವಿರುದ್ಧ ಅಬಕಾರಿ ಪ್ರಕರಣ ದಾಖಲಿಸಲಾಗಿದೆ. ಕುಂಬಳೆ ಎಕ್ಸೈಸ್ ಇನ್ಸ್‌ಪೆಕ್ಟರ್ ಕೆ.ವಿ. ಶ್ರಾವಣ್, ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಎ.ಬಿ. ಅಬ್ದುಲ್ಲ, ಪ್ರಿವೆಂಟಿವ್ ಆಫೀಸರ್ ಮೊಯ್ದೀನ್ ಸಾದಿಕ್, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಕೆ. ದಿನೂಪ್, ವಿ.ಎಲ್. ಸಿನಿಶ್, ನಿಖಿಲ್ ಪವಿತ್ರನ್, ಟಿ. ರಾಜೇಶ್, ಸಿವಿಲ್ ಎಕ್ಸೈಸ್ ಆಫೀಸರ್ ಚಾಲಕ ದಿಜಿತ್, ಕೃಷ್ಟಿನ್ ಎಂಬವರು ದಾಳಿಯಲ್ಲಿ ಭಾಗವಹಿಸಿದರು.

RELATED NEWS

You cannot copy contents of this page