ಕನ್ಯಪ್ಪಾಡಿ ಬಳಿ ಲಾರಿ ಅಪಘಾತ: ತಪ್ಪಿದ ಭಾರೀ ಅಪಾಯ: ಅಗಲಕಿರಿದಾದ, ಇಕ್ಕಟ್ಟಾದ ರಸ್ತೆಯಲ್ಲಿ ಸಂಚಾರ ಭೀತಿ

ಬದಿಯಡ್ಕ: ಕನ್ಯಪ್ಪಾಡಿ ಸಮೀಪ ಪಡಿಪ್ಪುರೆ ಎಂಬಲ್ಲಿನ ತಿರುವಿ ನಲ್ಲಿ ನಿನ್ನೆ ಮಧ್ಯಾಹ್ನ ಲಾರಿಯೊಂದು ಅಪಘಾತ ಕ್ಕೀಡಾಗಿದ್ದು, ಅದರಲ್ಲಿದ್ದ ವರು ಅದೃಷ್ಟವಶಾತ್ ಅಪಾಯ ದಿಂದ ಪಾರಾಗಿದ್ದಾರೆ. ಕುಂಬಳೆ ಭಾಗದಿಂದ  ಬದಿಯಡ್ಕದತ್ತ ಮೊಟ್ಟೆ ಸಾಗಿಸುತ್ತಿದ್ದ ಲಾರಿ ಪಡಿಪ್ಪುರೆ ತಿರುವಿಗೆ ತಲುಪಿದಾಗ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ರಸ್ತೆ ಬದಿ  ವ್ಯಕ್ತಿಯೊಬ್ಬರ ಕಂಪೌಂಡ್‌ಗೆ ಲಾರಿ ಮಗುಚಿ ನಿಂತಿದ್ದು ಇದರಿಂದ ಭಾರೀ ಅಪಾಯ ಕೂದಲೆಳೆ ಅಂತರದಲ್ಲಿ ತಪ್ಪಿಹೋಗಿ ದೆ. ಅಪಘಾತದಿಂದಾಗಿ ಅಲ್ಪಹೊತ್ತು ಇತರ ವಾಹನಗಳ ಸಂಚಾರಕ್ಕೆ ಅಡಚಣೆ ಎದುರಾಯಿತು. ಈ ಹಿಂದೆಯೂ ಇಲ್ಲಿ ವಾಹನಗಳು ಅಪಘಾತಕ್ಕೀಡಾಗಿವೆ.  ಇಲ್ಲಿ ರಸ್ತೆ ಅಗಲಕಿರಿದಾಗಿರುವುದೇ ವಾಹನಗಳು ಅಪಘಾತಕ್ಕೀಡಾಗಲು ಕಾರಣವಾ ಗಿದೆ. ಇಕ್ಕಟ್ಟಾದ ತಿರುವು ಹಾಗೂ ರಸ್ತೆ ಅಗಲಕಿರಿದಾಗಿರುವ ಇಲ್ಲಿ ವಾಹನಗಳು ನಿಯಂತ್ರಣ ತಪ್ಪುವು ದು ಸಾಮಾನ್ಯ ಘಟನೆಯಾಗಿದೆ.

ಕುಂಬಳೆ-ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆ ಇದಾಗಿದ್ದು, ಇತರೆಲ್ಲೆಡೆ ರಸ್ತೆ ಅಗಲವಿದೆ. ಆದರೆ ಇಲ್ಲಿ ಮಾತ್ರ ರಸ್ತೆ ಅಗಲ ಕಿರಿದಾಗಿರಲು ಕಾರಣವೇನೆಂದು ವಾಹನ ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ.

You cannot copy contents of this page