ಸುಳ್ಯ ನಿವಾಸಿಗೆ ಒಲಿದ ಕಾರುಣ್ಯ ಲಾಟರಿ

ಕಾಸರಗೋಡು: ಕೇರಳ ರಾಜ್ಯ ಲಾಟರಿಯ ಪ್ರಥಮ ಬಹುಮಾನ ವಾದ ಒಂದು ಕೋಟಿ ರೂಪಾಯಿ ಒಲಿದಿರುವುದು  ಸುಳ್ಯ ತಾಲೂಕಿನ ಉಬರಡ್ಕ ನಿವಾಸಿಗಾಗಿದೆ. ಉಬರಡ್ಕದ ವಿನಯ್ ಕ್ಯಾಟರರ್ಸ್ ಮಾಲಕ ವಿನಯ್  ಯಾವಟೆ ಅವರಿಗೆ ಈ ಬಹುಮಾನ ಬಂದಿದೆ. ಇವರು ಕಳೆದ ಶನಿವಾರ ಡ್ರಾ ನಡೆದ ಕಾರುಣ್ಯ ಲಾಟರಿ ಟಿಕೆಟ್ ಪಡೆದಿದ್ದರು. ಕಾಸರಗೋಡು ಮಧು ಲಾಟರಿ ಏಜೆನ್ಸೀಸ್‌ನ ಲಾಟರಿ ಟಿಕೆಟ್‌ನ್ನು  ಇವರು ಪಂಜಿಕಲ್ಲಿನಿಂದ ಖರೀದಿಸಿದ್ದರು. ಕೇರಳ ಲಾಟರಿ ಬಹು ಮಾನ ಈ ಹಿಂದೆಯೂ ಕರ್ನಾಟಕದ ಹಲವರಿಗೆ ಲಭಿಸಿರುತ್ತದೆ. ಇದೀಗ  ಮತ್ತೊಬ್ಬರಿಗೆ ಪ್ರಥಮ ಬಹುಮಾನ ವಾದ ೧ ಕೋಟಿ ರೂಪಾಯಿ ಲಭಿಸಿರುವುದು ಸಂತಸ ಮೂಡಿಸಿದೆ.

You cannot copy contents of this page