ಖ್ಯಾತ ಜಾದೂಗಾರ ಪ್ರೊ. ಮಾಧವ ನಿಧನ

ಕಾಸರಗೋಡು: ಹಿರಿಯ ಜಾದುಗಾರ ಪ್ರೊ. ಮಾಧವ (73) ನಿನ್ನೆ ನಿಧನ ಹೊಂದಿದರು. ಮೂಲತಃ ಉಬ್ರಂಗಳ ನಿವಾಸಿಯಾಗಿರುವ ಇವರು ಕೂಡ್ಲುನಲ್ಲಿ ವಾಸವಾಗಿದ್ದರು. ನೋರ್ತ್ ಮಲಬಾರ್ ಮ್ಯಾಜಿಕ್ ಫೌಂಡೇಶನ್ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿದ್ದರು. ನೋರ್ತ್ ಮಲಬಾರ್ ಗ್ರಾಮೀಣ ಬ್ಯಾಂಕ್‌ನಲ್ಲಿ ಮೆನೇಜರ್ ಆಗಿದ್ದರು. ೧೫ ಕಲಾವಿದರನ್ನೊಳಗೊಂಡ ಮಾಯಾರಂಜಿನಿ ತಂಡವನ್ನು ಕಟ್ಟಿ ಇಲ್ಯೂಶ್ಯನ್ ಜಾದು ಸಾಮಗ್ರಿಗಳನ್ನು ಬಳಸಿ ಕರ್ನಾಟಕ, ಕೇರಳದ ವಿವಿಧೆಡೆ ೫ ದಶಕಗಳ ಕಾಲ ಪ್ರದರ್ಶನ ನೀಡಿದ್ದಾರೆ. ಇವರ ಪುತ್ರ ಮಾಸ್ಟರ್ ಚಿಂತನ್ ಜಾದೂಗಾರನಾಗಿದ್ದು, ರಾಷ್ಟ್ರದ ಗಮನ ಸೆಳೆದಿದ್ದರಾದರೂ ಈ ಹಿಂದೆ ನಿಧನ ಹೊಂದಿದ್ದಾರೆ.

ಮೃತರು ಪತ್ನಿ ಜಯಶ್ರೀ, ಮಕ್ಕಳಾದ ಚೇತನ್ (ಫೊಟೋ ಜರ್ನಲಿಸ್ಟ್), ಚೈತ್ರಾ, ಚೇತಸ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

RELATED NEWS

You cannot copy contents of this page