ಬದಿಯಡ್ಕ: ಯುವತಿಯನ್ನು ಬಿಗಿದಪ್ಪಿಕೊಂಡ ಆರೋಪದಂತೆ ಓರ್ವನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಮೂಲತಃ ಶಂಕರಂಪಾಡಿ ಮಾಹಿಪಡ್ಪು ನಿವಾಸಿಯೂ ಪ್ರಸ್ತುತ ಬಾಡೂರಿನ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಶಿಬು ಕೆ.ವಿ (48) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಈತ ನಿನ್ನೆ 21ರ ಹರೆಯದ ಯುವತಿಯನ್ನು ಬಿಗಿದಪ್ಪಿಕೊಂಡಿರುವುದಾಗಿ ದೂರಲಾಗಿದೆ. ಈಬಗ್ಗೆ ಯುವತಿ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಳು. ಇದರಂತೆ ಪೊಲೀಸರು ಕೇಸು ದಾಖಲಿಸಿಕೊಂಡು ಇನ್‌ಸ್ಪೆಕ್ಟರ್ ಸಂತೋಷ್ ಕುಮಾರ್ ಆರೋಪಿಯನ್ನು ಬಂಧಿಸಿದ್ದಾರೆ.







