ಕುಂಬಳೆ: ಮಾರಾಟಕ್ಕಾಗಿ ಗಾಂಜಾ ಬೈಕ್‌ನಲ್ಲಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಸೆರೆಹಿಡಿಯಲಾಗಿದೆ. ಬಂದ್ಯೋಡು ಅಡ್ಕ ನಿವಾಸಿ ಅಬ್ದುಲ್ಲ ಯಾನೆ ಫ್ರೂಟ್ ಅಬ್ದುಲ್ಲ (64) ಎಂಬಾತನನ್ನು ಅಬಕಾರಿ ಅಧಿಕಾರಿಗಳು ಸೆರೆಹಿಡಿದಿದ್ದಾರೆ. ಈತನ ಕೈಯಿಂದ 2 ಕಿಲೋ ಗಾಂಜಾ ವಶಪಡಿಸಲಾಗಿದೆ.
ನಿನ್ನೆ ಮಧ್ಯಾಹ್ನ ಕುಂಬಳೆ ರೇಂಜ್ ಅಬಕಾರಿ ಇನ್‌ಸ್ಪೆಕ್ಟರ್ ಕೆ.ವಿ. ಶ್ರಾವಣ್ ನೇತೃತ್ವದಲ್ಲಿ ನಡೆಸಿದ ತಪಾಸಣೆ ವೇಳೆ ಅಬ್ದುಲ್ಲ ಗಾಂಜಾ ಸಹಿತ ಬೈಕ್‌ನಲ್ಲಿ ಸಂಚರಿಸುತ್ತಿರುವುದು ಕಂಡುಬಂದಿದೆ. ಕೂಡಲೇ ಬೈಕ್ ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ. ಬೈಕ್‌ನ್ನು ಕಸ್ಟಡಿಗೆ ತೆಗೆಯಲಾಗಿದೆ. ಸೆರೆಗೀಡಾದ ಅಬ್ದುಲ್ಲ ಹಲವು ಮಾದಕವಸ್ತು ಪ್ರಕರಣಗಳಲ್ಲಿ ಆರೋಪಿಯಾಗಿ ದ್ದಾನೆ. ಈ ಹಿಂದೆ ಸಣ್ಣ ಪ್ರಮಾಣದಲ್ಲಿ ಮಾತ್ರವೇ ಈತ ಮಾದಕವಸ್ತು ಮಾರಾಟ ನಡೆಸುತ್ತಿದ್ದನು. ಅಲ್ಪ ಕಾಲದಿಂದ ಹೆಚ್ಚು ಪ್ರಮಾಣದಲ್ಲಿ ಈತ ಮಾದಕವಸ್ತು ದಾಸ್ತಾನಿಸಿರಿ ಮಾರಾಟ ನಡೆಸುತ್ತಿದ್ದನೆಂದು ಅಧಿಕಾರಿಗಳು ತಿಳಿಸಿದ್ದಾರೆ. ಎಕ್ಸೈಸ್ ಅಸಿಸ್ಟೆಂಟ್ ಇನ್‌ಸ್ಪೆಕ್ಟರ್ ಕೆ. ಪೀತಾಂಬರನ್, ಪ್ರಿವೆಂಟೀವ್ ಆಫೀ ಸರ್‌ಗಳಾದ ಮನಾಫ್, ಜಿಜಿನ್, ಸಿಇಒಗಳಾದ ಅಖಿ ಲೇಶ್, ಕಣ್ಣನ್ ಕುಂಞಿ, ಚಾಲಕ ಪ್ರವೀಣ್ ಎಂಬಿ ವರ ನೇತೃತ್ವದಲ್ಲಿ ಆರೋಪಿಯನ್ನು ಸೆರೆಹಿಡಿ ಯಲಾಗಿದೆ.







