ರೈಲಿನಲ್ಲಿ ಮಹಿಳೆಯರ ಮುಂದೆ ಲೈಂಗಿಕ ಚೇಷ್ಠೆ: ಮಧ್ಯವಯಸ್ಕ ಸೆರೆ

ಕಾಸರಗೋಡು: ರೈಲಿನಲ್ಲಿ ಮಹಿಳೆಯರ ಮುಂದೆ ಲೈಂಗಿಕ ಚೇಷ್ಠೆ ಮಾಡಿದ ಮಧ್ಯವಯಸ್ಕನನ್ನು ಸೆರೆಹಿಡಿಯಲಾಗಿದೆ. ಕಣ್ಣೂರು ಜೋಸ್‌ಗಿರಿ ನಿವಾಸಿ ಜೋಸ್ ಮ್ಯಾಥ್ಯು (53) ಎಂಬಾತನನ್ನು ರೈಲ್ವೇ ಪೊಲೀಸರು ಬಂಧಿಸಿದ್ದಾರೆ. ಇಂದು ಮುಂಜಾನೆ ಕಾಸರಗೋಡು ರೈಲು ನಿಲ್ದಾಣದಲ್ಲಿ ಒಕ್ಕಾ ಎಕ್ಸ್‌ಪ್ರೆಸ್ ತಲುಪಿದಾಗ  ಈತ ಪ್ರಯಾಣಿಕೆಯರೊಂದಿಗೆ ಅನುಚಿತವಾಗಿ ವರ್ತಿಸಿರುವುದಾಗಿ ದೂರಲಾಗಿದೆ. ಈ ಬಗ್ಗೆ ಓರ್ವೆ ಯುವತಿ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದು, ಕೂಡಲೇ ಎಸ್‌ಐ ಸನಿಲ್ ಕುಮಾರ್ ನೇತೃತ್ವದ ಪೊಲೀಸರು ತಲುಪಿ ಆರೋಪಿಯನ್ನು ಬಂಧಿಸಿದ್ದಾರೆ.  ಅನಂತರ ಈತನನ್ನು ರೈಲಿನಿಂದಿಳಿಸಿ ಠಾಣೆಗೆ ಕೊಂಡೊಯ್ದು ನೋಟೀಸು ನೀಡಿ ಬಿಡುಗಡೆಗೊಳಿಸಲಾಗಿದೆ.

RELATED NEWS

You cannot copy contents of this page