ಉಪ್ಪಳ: ಹೊಸಂಗಡಿಯ ಲಾಡ್ಜ್ನ ಕೊಠಡಿಗೆ ಅತಿಕ್ರಮಿಸಿ ನುಗ್ಗಿ ಯುವಕ ಮತ್ತು ಯುವತಿಯನ್ನು ಜೊತೆಗೆ ನಿಲ್ಲಿಸಿ ನಗ್ನ ಚಿತ್ರ ತೆಗೆದು ಬೆದರಿಕೆಯೊಡ್ಡಿ ಹಣ ಹಾಗೂ ಫೋನ್ ಅಪಹರಿಸಿದ ಪ್ರಕರಣದಲ್ಲಿ ಓರ್ವನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಮಂಜೇ ಶ್ವರ ಪಿರಾರಮೂಲೆ ನಿವಾಸಿಯೂ ಕಡಂಬಾರಿನಲ್ಲಿ ವಾಸಿಸುವ ಆರಿಸ್ (40) ಬಂಧಿತ ಆರೋಪಿಯಾಗಿ ದ್ದಾನೆ. ಈತನನ್ನು ಇನ್ಸ್ಪೆಕ್ಟರ್ ಪಿ. ಅಜಿತ್ ಕುಮಾರ್ ನೇತೃತ್ವದಲ್ಲಿ ಮಂಗಳೂರಿನಿಂದ ಬಂಧಿಸಲಾಗಿದೆ. ಕಳೆದ ಬುಧವಾರ ಮಧ್ಯಾಹ್ನ ಉಳ್ಳಾಲ ಮೋಂಟುಗೋಳಿಯ ಮೊಹಮ್ಮದ್ ಹನೀಫ(40) ಹಾಗೂ ಯುವತಿ ಹೊಸಂಗಡಿಯ ಲಾಡ್ಜ್ನಲ್ಲಿ ಕೊಠಡಿ ಪಡೆದಿದ್ದರು. ಈ ವೇಳೆ ಮೂರು ಮಂದಿ ತಂಡ ಅಲ್ಲಿಗೆ ಅತಿಕ್ರಮಿಸಿ ನುಗ್ಗಿ ಯುವಕ ಹಾಗೂ ಯುವತಿಗೆ ಬೆದರಿಕೆಯೊಡ್ಡಿ ೫ ಸಾವಿರ ರೂ. ಫೋನ್ ಲಪಟಾಯಿ ಸಿರುವುದಾಗಿ ದೂರಲಾಗಿದೆ.







