ಕುಂಬಳೆ: ಯುವಕನೋರ್ವ ಮನೆಯ ಹಾಲ್ನಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಇಚ್ಲಂಗೋಡು ಚಿತ್ತೂರು ಎಂಬಲ್ಲಿನ ದಿ| ಕುಂಞಿಪಳ್ಳಿ ಎಂಬವರ ಪುತ್ರ ಅಬ್ದುಲ್ ಸಲೀಂ (33) ಸಾವಿಗೀಡಾದ ಯುವಕನಾಗಿ ದ್ದಾರ. ಇವರ ತಾಯಿ ಆಯಿಷಾಬಿ ಮಗಳ ಮನೆಗೆ ತೆರಳಿದ್ದರು. ಇದರಿಂದ ಅಬ್ದುಲ್ ಸಲೀಂ ಮಾತ್ರವೇ ನಿನ್ನೆ ರಾತ್ರಿ ಮನೆಯಲ್ಲಿದ್ದರು. ಇಂದು ಬೆಳಿಗ್ಗೆ ಸ್ಥಳೀಯರು ಇಲ್ಲಿಗೆ ತಲುಪಿ ನೋಡಿದಾಗ ಅಬ್ದುಲ್ ಸಲೀಂ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಬಗ್ಗೆ ಮಾಹಿತಿ ಲಭಿಸಿದ ಕುಂಬಳೆ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ.







