ಕುಂಬಳೆ: ಮರದ ಮಿಲ್‌ನಲ್ಲಿ ಮರ ತುಂಡುಮಾಡುತ್ತಿದ್ದಂತೆ ಮರ ಚದುರಿ ತಲೆಮೇಲೆ ಬಿದ್ದು ಗಾಯ ಗೊಂಡ ಮಿಶನ್ ಆಪರೇಟರ್ ಮೃತಪಟ್ಟಿದ್ದಾರೆ. ಕುಂಬಳೆ ಶಾಂತಿಪಳ್ಳದ ಜಮಾಲಿಯ ಮರದ ಮಿಲ್‌ನ ಮಿಶನ್ ಆಪರೇಟರ್, ಕುಂಟಂಗೇ ರಡ್ಕ ವೆಲ್ಫೇರ್ ಶಾಲೆ ಬಳಿ ವಾಸಿಸುವ ಗೋಪಾಲನ್ (60) ಮೃತಪಟ್ಟ ದುರ್ದೈವಿ. ಕಳೆದ ಶುಕ್ರವಾರ ಘಟನೆ ಸಂಭವಿಸಿದೆ. ಗಂಭೀರ ಗಾಯಗೊಂಡ ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಶನಿವಾರ ನಿಧನ ಸಂಭವಿಸಿದೆ. ದೀರ್ಘಕಾಲದಿಂದ ಇವರು ಇದೇ ಮಿಲ್‌ನಲ್ಲಿ ಮಿಶನ್ ಆಪರೇಟರ್ ಆಗಿದ್ದಾರೆ. ಮೃತರು ಪತ್ನಿ ಪದ್ಮಾವತಿ, ಮಕ್ಕಳಾದ ಪವನ್ ಕುಮಾರ್, ಪವಿತ್ರ, ಪೂಜಾ ಕುಮಾರ್, ಸಹೋದರರಾದ ಸೀತಾರಾಮ, ಜನಾರ್ದನ, ಗಂಗಾಧರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







