ವ್ಯಕ್ತಿ ಮನೆಯ ಸಿಟೌಟ್‌ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಬದಿಯಡ್ಕ:  ವ್ಯಕ್ತಿಯೊಬ್ಬರು ಮನೆಯ ಸಿಟೌಟ್‌ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕಾಡಮನೆ ಬಳಿಯ ಮಾಡತ್ತಡ್ಕ ನಿವಾಸಿ ದಿ| ಗೋವಿಂದ ನಾಯ್ಕ-ಪರಮೇಶ್ವರಿ ದಂಪತಿಯ ಪುತ್ರ ನಾರಾಯಣ ನಾಯ್ಕ (54) ಮೃತಪಟ್ಟ ವ್ಯಕ್ತಿಯಾಗಿದ್ದಾರೆ.

ನಿನ್ನೆ ಸಂಜೆ ಮನೆಯ ಸಿಟೌಟ್‌ನಲ್ಲಿ ಇವರ ಮೃತದೇಹ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಘಟನೆ  ವೇಳೆ ಮನೆಯಲ್ಲಿ ಇವರು ಮಾತ್ರವೇ ಇದ್ದರೆನ್ನಲಾಗುತ್ತಿದೆ. ಘಟನೆ ಬಗ್ಗೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮೃತರು ಪತ್ನಿ ತಿರುಮಲೇಶ್ವರಿ, ಮಕ್ಕಳಾದ ಮಿಥುನ್‌ರಾಜ್, ಹರ್ಷಿತಾ,ಸಹೋದರಿ ಗೌರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವೆ ಸಹೋದರಿ ಲಕ್ಷ್ಮಿ ಈ ಹಿಂದೆ ನಿಧನಹೊಂದಿದ್ದಾರೆ.

You cannot copy contents of this page