ರಸ್ತೆ ಬದಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಧ್ಯೆ ಮೃತ್ಯು: ಮಾಹಿತಿಯಿದ್ದವರು ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಕರೆ

ಮಂಜೇಶ್ವರ: ಪ್ರಜ್ಞಾಹೀನ ಸ್ಥಿತಿಯಲ್ಲಿ ರಸ್ತೆ ಬದಿಯಲ್ಲಿ ಪತ್ತೆಯಾಗಿ ಬಳಿಕ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಅಪರಿಚಿತ ವ್ಯಕ್ತಿ  ಮೃತಪಟ್ಟಿದ್ದಾರೆ.  ಈ ತಿಂಗಳ 2ರಂದು ಸಂಜೆ 7.30ಕ್ಕೆ ಕುಂಜತ್ತೂರು ರಸ್ತೆ ಬದಿ ಸುಮಾರು  60ರ ಹರೆಯದ ಪುರುಷ ಅರೆಪ್ರಜ್ಞಾವಸ್ಥೆಯಲ್ಲಿ ಪತ್ತೆಯಾಗಿದ್ದರು. ಅವರನ್ನು ಊರವರು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ  ದಾಖಲಿಸಿದ್ದರು.  ಆದರೆ ಚಿಕಿತ್ಸೆ ಫಲಕಾರಿಯಾಗದೆ 20ರಂದು ರಾತ್ರಿ ವ್ಯಕ್ತಿ ಮೃತಪಟ್ಟಿದ್ದಾರೆ.  ಮಂಜೇಶ್ವರ ಪೊಲೀಸರು ಆಸ್ಪತ್ರೆಗೆ ತೆರಳಿ ಮೃತದೇಹದ ಮಹಜರು ನಡೆಸಿದ್ದಾರೆ. ಇದೀಗ ಮೃತದೇ ಹವನ್ನು ಶವಾಗಾರದಲ್ಲಿರಿಸಲಾಗಿದೆ.  ಚಿಕಿತ್ಸೆ ಮಧ್ಯೆ  ವ್ಯಕ್ತಿಗೆ ಒಮ್ಮೆ ಪ್ರಜ್ಞೆ ಬಂದಿದ್ದು ಈ ವೇಳೆ ಹೆಸರು ಕುಮಾರ ಎಂದು ತಿಳಿಸಿರುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ  ಮೃತ ವ್ಯಕ್ತಿ ಯಾರೆಂದು ತಿಳಿಯಲಿರುವ ಪ್ರಯತ್ನ ಪೊಲೀಸರು ಮುಂದುವರಿಸಿದ್ದಾರೆ. ಇದೇ ವೇಳೆ ಈ ವ್ಯಕ್ತಿಯ ಕುರಿತು ಮಾಹಿತಿ ಉಳ್ಳವರು  ಅಥವಾ ಸಂಬಂಧಿಕರಿದ್ದಲ್ಲಿ ಮಂಜೇಶ್ವರ ಪೊಲೀಸ್ ಠಾಣೆಯನ್ನು ಸಂಪರ್ಕಿಸ ಬೇಕಾಗಿ ಎಸ್‌ಐ  ಉಮೇಶ್ ತಿಳಿಸಿದ್ದಾರೆ. ಫೋನ್: 04998-272640, 9946022468.

RELATED NEWS

You cannot copy contents of this page