ಹೊಸದುರ್ಗ: ಲಾಡ್ಜ್‌ಗಳಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಯೆಂಬ ಮಾಹಿತಿಯ ಹಿನ್ನೆಲೆಯಲ್ಲಿ ಚಂದೇರ ಪೊಲೀಸರು ಚೆರ್ವ ತ್ತೂರಿನಲ್ಲಿ ಲಾಡ್ಜ್‌ವೊಂದಕ್ಕೆ ದಾಳಿ ನಡೆಸಿ ಹಲವರನ್ನು ಬಂಧಿಸಿದ್ದಾರೆ. ಚೆರ್ವತ್ತೂರಿನ ಮಲಬಾರ್ ಲಾಡ್ಜ್ ಕೇಂದ್ರೀಕರಿಸಿ ನಡೆಸಿದ ದಾಳಿ ವೇಳೆ ಅಲ್ಲಿ ಅನೈತಿಕ ಚಟುವಟಿಕೆಯಲ್ಲಿ ಪಾಲ್ಗೊಂಡ ತಂಡವನ್ನು ಪೊಲೀಸರು ಕೈಯ್ಯಾರೆ ಸೆರೆಹಿಡಿದಿದ್ದಾರೆ. ಲಾಡ್ಜ್ ಮಾಲಕ ಮೊಹಮ್ಮದ್ ಅಸೈನಾರ್, ನೌಕರೆ ಮುಳ್ಳೇರಿಯ ನಿವಾಸಿ ನಸೀಮ, ಇತರ ನಾಲ್ಕು ಮಂದಿ ಮಹಿಳೆಯರು ಹಾಗೂ ಇಬ್ಬರು ಪುರುಷರನ್ನು ಬಂಧಿಸಲಾಗಿದೆ. ಡಿವೈಎಸ್ಪಿ ಸುರೇಶ್ ಬಾಬುರ ನಿರ್ದೇಶ ಮೇರೆಗೆ ಚಂದೇರ ಇನ್‌ಸ್ಪೆಕ್ಟರ್ ಎ. ಪ್ರಶಾಂತ್‌ರ ನೇತೃತ್ವ ದಲ್ಲಿ ಎಎಸ್‌ಐ ಲೀನ, ಸಿವಿಲ್ ಪೊಲೀಸ್ ಆಫೀಸರ್‌ಗಳಾದ ಶರಣ್ಯ, ಸುರೇಶ್ ಎಂಬಿವರನ್ನೊಳಗೊಂಡ ತಂಡ ಆರೋಪಿಗಳನ್ನು ಬಂಧಿಸಿದೆ. ಆರ್ಥಿಕ ಲಾಭಕ್ಕಾಗಿ ಯುವತಿಯ ರನ್ನು ಬಳಸಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಚೆರ್ವತ್ತೂರಿನಲ್ಲಿ ಈ ಹಿಂದೆಯೂ ಪೊಲೀಸರು ಲಾಡ್ಜ್‌ಗ ಳಿಗೆ ದಾಳಿ ನಡೆಸಿ ಈ ರೀತಿಯ ತಂಡವನ್ನು ಸೆರೆಹಿಡಿದಿದ್ದರು.






