ಕಣ್ಣೂರು: ವಿವಾಹಿತ ಯುವತಿ ಬಸ್ ಕಂಡಕ್ಟರ್‌ನೊಂದಿಗೆ ಪರಾರಿಯಾದ ಬಗ್ಗೆ ದೂರಲಾಗಿದೆ. ಕಣ್ಣೂರು ಬಳಿಯ ಕಣ್ಣವಂ ನೆಡುಂಪೊಯಿಲ್ ಪುಳಕುಟ್ಟಿ ನಿವಾಸಿಯಾದ ೨೪ರ ಹರೆಯದ ಯುವತಿ ನಾಪತ್ತೆಯಾಗಿದ್ದಾಳೆ. ಕಳೆದ ಬುಧವಾರ ಮಧ್ಯಾಹ್ನ 1.30ರ ವೇಳೆ ಈಕೆ ಮನೆಯಿಂದ ಹೊರಗೆ ಹೋಗಿದ್ದಳೆನ್ನಲಾಗಿದೆ. ಅನಂತರ ಮನೆಗೆ ಮರಳಿ ತಲುಪಿಲ್ಲವೆಂದು ತಿಳಿಸಿ ಪುಳತ್ತುಂಕರ ನಿವಾಸಿಯಾದ ಪತಿ ಕಣ್ಣವಂ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಕೇಸು ದಾಖಲಿಸಿ ನಡೆಸಿದ ತನಿಖೆ ವೇಳೆ ಯುವತಿ ಖಾಸಗಿ ಬಸ್‌ನ ಕಂಡಕ್ಟರ್‌ನೊಂದಿಗೆ ಪರಾರಿಯಾಗಿರು ವುದಾಗಿ ತಿಳಿದು ಬಂದಿದೆ.







