ಮಾರಾಟಕ್ಕಾಗಿ ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ 19.340 ಗ್ರಾಂ ಎಂಡಿಎಂಎ ಪತ್ತೆ: ಓರ್ವ ಸೆರೆ

ಕುಂಬಳೆ: ಮಾರಾಟಕ್ಕಾಗಿ ಸ್ಕೂಟಿಯಲ್ಲಿ ಸಾಗಿಸುತ್ತಿದ್ದ ಮಾರಕ ಮಾದಕ ದ್ರವ್ಯವಾದ 19.340 ಗ್ರಾಂ ಎಂಡಿಎಂಎಯನ್ನು ಕುಂಬಳೆ ಪೊಲೀಸರು ಪತ್ತೆಹಚ್ಚಿ ವಶಪಡಿಸಿ ಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲೆಯ ಪೆರುಮಣ್ಣೂರು ಪಳ್ಳಕಳ್ಳಾಪ್ ಎಸ್.ಎಂ. ಮಂಜಿಲ್‌ನ  ಸೈಯ್ಯದ್ ಅಫ್ರೀದಿ (28) ಎಂಬಾತ ನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಾದಕದ್ರವ್ಯ ಸಾಗಿಸುತ್ತಿದ್ದ ಬಗ್ಗೆ ಕುಂಬಳೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಬೈಜು ಕೆ. ಜೋಸ್‌ರಿಗೆ ಗುಪ್ತ ಮಾಹಿತಿ ಲಭಿಸಿತ್ತು. ಅದರಂತೆ ಎಸ್‌ಐ ಸನಿತ್ ಸಿ, ಎಎಸ್‌ಐ ಗಳಾದ ಸುಧೀಶ್, ಅತುಲ್ ರಾಮ್, ಸಜೀಶ್ ಮತ್ತು ಮಹೇಶ್‌ರನ್ನೊಳಗೊಂಡ ಪೊಲೀಸರ ತಂಡ ಇಂದು ಮುಂಜಾನೆ ೧ ಗಂಟೆಗೆ ಶಿರಿಯಾಕ್ಕೆ ಸಮೀಪದ ಮುಟ್ಟಂನ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಕಾರ್ಯಾಚರಣೆಗಿಳಿದಿದ್ದು, ಆ ವೇಳೆ ಆ ದಾರಿಯಾಗಿ ಬರುತ್ತಿದ್ದ ಕರ್ನಾಟಕ ರಾಜ್ಯ ನೋಂದಾಯಿತ ಸ್ಕೂಟಿಯನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಎಂಡಿಎಂಎ ಪತ್ತೆಯಾಗಿದೆ. ತಕ್ಷಣ ಸ್ಕೂಟಿ ಚಲಾಯಿಸುತ್ತಿದ್ದ ಸೈಯ್ಯದ್ ಅಫ್ರೀದಿಯನ್ನು ವಶಕ್ಕೆ ತೆಗೆದು ಪ್ರಕರಣ ದಾಖಲಿಸಿ ಬಂಧಿಸ ಲಾಗಿದೆ. ಸ್ಕೂಟರ್‌ನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

RELATED NEWS

You cannot copy contents of this page