ಕಾಸರಗೋಡು ಸರಕಾರಿ ಮೆಡಿಕಲ್ ಕಾಲೇಜು ಕಾಮಗಾರಿ ಅಪೂರ್ಣ: ಮುಷ್ಕರ ಸಮಿತಿಯಿಂದ ಅನಿರ್ಧಿಷ್ಟಾವಧಿ ಮುಷ್ಕರ ಇಂದಿನಿಂದ

ಕಾಸರಗೋಡು: ಕಾಸರಗೋಡು ಸರಕಾರಿ ಮೆಡಿಕಲ್ ಕಾಲೇಜಿಗೆ ಶಿಲಾನ್ಯಾಸಗೈದು 13 ವರ್ಷ ಕಳೆದರೂ  ಮೆಡಿಕಲ್ ಕಾಲೇಜು ಸಾಕ್ಷಾತ್ಕಾರಗೊ ಳ್ಳದಿರುವುದನ್ನು ಪ್ರತಿಭಟಿಸಿ ಇಂದಿನಿಂದ ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಅನಿರ್ದಿಷ್ಟಕಾಲ ಮುಷ್ಕರ ನಡೆಸುವುದಾಗಿ ಮೆಡಿಕಲ್ ಕಾಲೇಜು ಮುಷ್ಕರ ಸಮಿತಿ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 2013 ನವಂಬರ್ 30ರಂದು ಅಂದಿನ ಮುಖ್ಯಮಂತ್ರಿ ಉಮ್ಮನ್‌ಚಾಂಡಿ ಮೆಡಿಕಲ್ ಕಾಲೇಜಿಗೆ ಶಿಲಾನ್ಯಾಸಗೈದಿ ದ್ದರು. ಬಳಿಕ 2014-15ರ ವರ್ಷದಲ್ಲಿ ಅಕಾಡೆಮಿಕ್ ಬ್ಲೋಕ್ ಹಾಗೂ ಆಸ್ಪತ್ರೆಯ ಕಟ್ಟಡಕ್ಕೆ ಹಣ ಮಂಜೂರು ಮಾಡಲಾಯಿತು. 2016 ಜನವರಿಯಲ್ಲಿ ಅಕಾಡೆಮಿಕ್ ಬ್ಲೋಕ್‌ನ ಕೆಲಸ ಆರಂಭಿಸಲಾಯಿ ತಾದರೂ ಆಸ್ಪತ್ರೆ ಕಟ್ಟಡದ ಕೆಲಸ ತಾಂತ್ರಿಕ ಕಾರಣ ಹೇಳಿ ಟೆಂಡರ್ ಮುಂದೂಡಲಾಯಿತು. ಬಳಿಕ ೨೦೧೮ರಲ್ಲಿ ರೀ ಟೆಂಡರ್ ಮಾಡಿ ಆಸ್ಪತ್ರೆಯ ಕಟ್ಟಡದ ಕೆಲಸ  ಆರಂಭಿಸಲಾಯಿತು. 8 ವರ್ಷವಾಗಿ ಯೂ ಆಸ್ಪತ್ರೆಯ ಕಾಮಗಾರಿ ಇದುವರೆಗೆ ಪೂರ್ತಿಗೊಳಿಸಲು ಸಾಧ್ಯವಾಗಲಿಲ್ಲ. ಕಳೆದ ಶೈಕ್ಷಣಿಕ ವರ್ಷ 50 ಮೆಡಿಕಲ್ ಸೀಟು ಮಂಜೂರು ಮಾಡಿ ಅಧ್ಯಯನ ಆರಂಭಿಸಲಾದರೂ ದಾಖಲಾತಿ ಚಿಕಿತ್ಸೆ ಇದುವರೆಗೆ ಆರಂಭಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ತುರ್ತಾಗಿ ಆಸ್ಪತ್ರೆ ಕಟ್ಟಡವನ್ನು ಪೂರ್ತಿಗೊಳಿಸಿ ಶೀಘ್ರವೇ ದಾಖಲಾತಿ ಚಿಕಿತ್ಸೆ ಆರಂಭಿಸಬೇಕೆಂದು ಮುಷ್ಕರ ಸಮಿತಿ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.

You cannot copy contents of this page