ಅಪಾಯಕಾರಿಯಾಗಿ ಬದಲಾದ ಮೀಪುಗುರಿ ಜಂಕ್ಷನ್: ಕಾರು-ಆಟೋ ರಿಕ್ಷಾ ಢಿಕ್ಕಿ; ಪ್ರಯಾಣಿಕರು ಅದೃಷ್ಟವಶಾತ್ ಪಾರು

ಕಾಸರಗೋಡು: ಕಾಸರಗೋಡು-ಮಧೂರು ರಸ್ತೆಯಲ್ಲಿ ೨ಮೀಪುಗುರಿ ಅಪಾಯಕಾರಿ ಪ್ರದೇಶವಾಗಿ ಬದಲಾಗಿದೆ.  ಇಲ್ಲಿ ಪದೇ ಪದೇ ವಾಹನಗಳು ಅಪಘಾತಕ್ಕೀಡಾಗುತ್ತಿರುವುದಾಗಿ ಸ್ಥಳೀಯರು ತಿಳಿಸುತ್ತಿದ್ದಾರೆ. ನಿನ್ನೆ ಸಂಜೆ   ಜಿಲ್ಲಾ ಪೊಲೀಸ್ ಕೇಂದ್ರಕ್ಕೆ ತಿರುಗುವ ರಸ್ತೆಯಲ್ಲಿ ಕಾರು ಹಾಗೂ ಆಟೋ ರಿಕ್ಷಾ ಢಿಕ್ಕಿ ಹೊಡೆದು ಎರಡು ವಾಹನಗಳು  ಹಾನಿಗೀಡಾಗಿವೆ. ಅದೃಷ್ಟವಶಾತ್  ಆ ವಾಹನಗಳಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ಕಾಸರಗೋಡು-ಮಧೂರು ರಸ್ತೆ  ಇಕ್ಕಟ್ಟಾಗಿದ್ದರೂ ಇದರಲ್ಲಿ   ವಾಹನಗಳು ಅಪರಿಮಿತ ವೇಗದಲ್ಲಿ ಸಂಚರಿಸುತ್ತಿರುವುದೇ ಅಪಘಾತಗಳಿಗೆ ಕಾರಣವಾಗುತ್ತಿದೆ. ಇದರಿಂದ ಪಾರಕಟ್ಟೆ ರಸ್ತೆಯಲ್ಲಿ ಬರುವ ವಾಹನಗಳು  ಮೂರು ರಸ್ತೆಗಳು ಸಂಗಮಿಸುವ ಪ್ರದೇಶದಲ್ಲಿ ಅಪಘಾತಕ್ಕೀಡಾಗುತ್ತಿರುವುದಾಗಿ ನಾಗರಿಕರು ತಿಳಿಸುತ್ತಿದ್ದಾರೆ.  ಅಪಘಾತ ತಪ್ಪಿಸಲು ಸೂರ್ಲು-ಪಾರಕಟ್ಟೆ ರಸ್ತೆ ಜಂಕ್ಷನ್‌ನಲ್ಲಿ ತುರ್ತಾಗಿ ಟ್ರಾಫಿಕ್ ಸರ್ಕಲ್, ಅಪಾಯ ಸೂಚನೆ ನೀಡುವ ಫಲಕಗಳನ್ನು ಅಥವಾ ವೇಗ ತಡೆಯನ್ನು ಸ್ಥಾಪಿಸಬೇಕೆಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.  ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ವಾಹನಗಳನ್ನು ಈ ರಸ್ತೆಯಲ್ಲಿ ಸಂಚರಿಸಲು ತಿಳಿಸುತ್ತಿದ್ದು ಆದ್ದರಿಂದ ಹೆಚ್ಚಿನ ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತಿವೆ. ಆದ್ದರಿಂದ ಈ ರಸ್ತೆಯನ್ನು ಅಭಿವೃದ್ಧಿಪಡಿಸಿ ವಾಹನ ಸಂಚಾರಕ್ಕೆ ಸೌಕರ್ಯ ಹೆಚ್ಚಿಸಬೇಕೆಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.

RELATED NEWS

You cannot copy contents of this page