ಪಂಚಾಯತ್ ಚುನಾವಣೆಯ ಬಳಿಕ ನಾಲ್ಕು ಆಡಳಿತ ಸಮಿತಿ ಸಭೆಯಲ್ಲಿ ಭಾಗವಹಿಸದ ಪಂ. ಸದಸ್ಯ

ಕಾಸರಗೋಡು: ಪಂಚಾಯತ್ ಚುನಾವಣೆಯ ಬಳಿಕ ನಡೆದ ನಾಲ್ಕು ಪಂಚಾಯತ್ ಬೋರ್ಡ್ ಸಭೆಗಳಲ್ಲೂ ಭಾಗವಹಿಸದ ಓರ್ವ ಪಂಚಾಯತ್ ಸದಸ್ಯ! ಎಣ್ಮಕಜೆ ಪಂಚಾಯತ್‌ನಲ್ಲಿ ಈ ಅಪರೂಪದ ಘಟನೆ ನಡೆದಿದೆ. ಪಂಚಾಯತ್‌ನ ಸಿಪಿಎಂ ಸದಸ್ಯ ಸುಧಾಕರ ಪಂಚಾಯತ್ ಸದಸ್ಯನಾದ ಬಳಿಕ ಕರ್ನಾಟಕದ ಓರ್ವ ವೈದ್ಯರ ಪ್ರಮಾಣಪತ್ರ ಹಾಜರುಪಡಿಸಿ ಸಭೆಯಲ್ಲಿ ಭಾಗವಹಿಸದೆ ವಿವಾದಗಳೆಡೆಯಲ್ಲಿ ಮುಳುಗಿರುವುದಾಗಿ ನಿನ್ನೆ ನಡೆದ ಪಂಚಾಯತ್ ಆಡಳಿತ ಸಮಿತಿ ಸಭೆಯಲ್ಲಿ ಆರೋಪಿಸಲಾಗಿದೆ. ಮಾತ್ರವಲ್ಲ ಸುಧಾಕರ  ನೀಡಿದ ವೈದ್ಯಕೀಯ ಪ್ರಮಾಣಪತ್ರ ಅನುಸಾರ ಆ ರೀತಿಯ ಓರ್ವ ಡಾಕ್ಟರ್ ಕರ್ನಾಟಕದಲ್ಲಿ ಇದ್ದಾರೆಯೋ ಎಂಬ ಬಗ್ಗೆ ತನಿಖೆ ನಡೆಸಬೇಕೆಂದು, ಹಾಗೆ ಓರ್ವರಿದ್ದಲ್ಲಿ ಅವರು ಪ್ರಮಾಣಪತ್ರ ನೀಡಿದ್ದಾರೆಯೋ ಎಂದೂ ಕೂಡಾ ಪತ್ತೆಹಚ್ಚಬೇಕೆಂದು ಅಭಿಪ್ರಾಯ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಮೆಡಿಕಲ್ ಬೋರ್ಡ್‌ನ ಪ್ರಮಾಣಪತ್ರ ಹಾಜರುಪಡಿಸಲು ಸುಧಾಕರನಲ್ಲಿ ಆಗ್ರಹಿಸಲು ಪಂಚಾಯತ್ ಕಾರ್ಯದರ್ಶಿಗೆ ನಿರ್ದೇಶಿಸಲಾಗಿದೆ.

ಕಾಸರಗೋಡಿನಲ್ಲಿ ಸಾಕಷ್ಟು ಆಸ್ಪತ್ರೆಗಳು ಹಾಗೂ ತಜ್ಞ ಡಾಕ್ಟರ್‌ಗಳಿದ್ದರೂ ಕರ್ನಾಟಕದಲ್ಲಿ ಚಿಕಿತ್ಸೆ ಪಡೆದಿರುವುದು ಸದಸ್ಯರಲ್ಲಿ ಆಶ್ಚರ್ಯಕ್ಕೆ ಕಾರಣವಾಗಿದೆ. ಇದೇ ವೇಳೆ ಸುಧಾಕರನಿಂದ ಹಲವು ಕಾಲಗಳಿಂದ ದೌರ್ಜನ್ಯಕ್ಕೀಡಾಗುತ್ತಿ ರುವ ಒಂದು ಕುಟುಂಬ ಈತನ ವಿರುದ್ಧ ದೌರ್ಜನ್ಯ ಪ್ರಕರಣ ಕೇಸು ಜ್ಯಾರಿಯಲ್ಲಿದೆ ಎಂದು ಸೂಚಿಸಿ ಇತ್ತೀಚೆಗೆ ಪಂಚಾಯತ್ ಕಾರ್ಯ ದರ್ಶಿಗೆ ದೂರು ನೀಡಿತ್ತು. ದೂರಿನ ಜೊತೆಯಲ್ಲಿ ಎಫ್‌ಐಆರ್‌ನ ಪ್ರತಿ, ಸುಧಾಕರನ ದೌರ್ಜನ್ಯದ ದೃಶ್ಯಗಳು ಅಡಕವಾದ ಪೆನ್‌ಡ್ರೈವ್ ಕೂಡಾ ಲಭಿಸಿದೆ ಎಂದು ಪಂಚಾ ಯತ್ ನೌಕರರು ಸೂಚಿಸಿದ್ದಾರೆ.

ಸತತವಾಗಿ  ಪಂಚಾಯತ್ ಬೋರ್ಡ್‌ನ ಮೂರು ಸಭೆಯಲ್ಲಿ ಸೂಕ್ತವಾದ ಕಾರಣ ನೀಡದೆ  ಭಾಗವಹಿ ಸದಿರುವವರ ಪಂ ಚಾಯತ್ ಸದಸ್ಯತನ ಅಸಿಂಧು ವಾಗುತ್ತದೆ ಎಂದು ಪಂಚಾ ಯತ್‌ರಾಜ್ ಕಾನೂನಿನಲ್ಲಿ ಸ್ಪಷ್ಟಪಡಿಸಲಾಗಿದೆ. ನಾಡಿನ ಹಾಗೂ ಜನರ ಅಭಿವೃದ್ಧಿಗೆ ಬೇಕಾಗಿ ಪ್ರಯತ್ನಿಸುವ ಪಕ್ಷದ ಪಂಚಾಯತ್ ಸದಸ್ಯ ನಾಳೆ ನಡೆಯುವ ಈ ಸದಸ್ಯ ಪ್ರತಿನಿಧಿಸುವ ವಾರ್ಡ್‌ನ ಗ್ರಾಮಸಭೆಯಲ್ಲಿ ಭಾಗವಹಿಸಬಹುದೇ ಎಂಬ ಬಗ್ಗೆ ಮತದಾರರು ನಿರೀಕ್ಷೆ ಯಲ್ಲಿದ್ದಾರೆ.

You cannot copy contents of this page